ಈ ಹಿಂದೆ ಸ್ಥಳೀಯ ಸ್ವಸರ್ಕಾರಿ ಸಂಸ್ಥೆಗಳ ಸಹಾಯಕ ಇಂಜಿನಿಯರ್‌ಗಳು ವಾತ್ರ ಕಟ್ಟಡಗಳ ಫಿಟ್‌ನೆಸ್ ಪರಿಶೀಲಿಸುತ್ತಿದ್ದರು. ಈಗ ತಪಾಸಣೆ ಕಠಿಣಗೊಂಡಿದ್ದು, ವೈದ್ಯಾಧಿಕಾರಿ, ಅಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆ, ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಠಾಣೆಯ ಎಸ್‌ಎಚ್‌ಒ ಮತ್ತು ಪಂಚಾಯಿತಿ ಕಾರ್ಯದರ್ಶಿ ಅವರನ್ನೊಳಗೊಂಡ ತಂಡ ಶಾಲಾ ಕಟ್ಟಡಗಳ ಫಿಟ್‌ನೆಸ್ ಪರಿಶೀಲಿಸಲಿದೆ.