ಶಿಕ್ಷಕರ ಪ್ರಾಮಾಣಿಕ ಪ್ರಯತ್ನದಿಂದ ಶಾಲೆಯ ಉನ್ನತಿ

ಸಂತೆಕಟ್ಟೆ ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆನರಾ ಬ್ಯಾಂಕ್ ಸಿಆರ್‌ಎಸ್ ಫಂಡ್‌ನಿಂದ ನಿರ್ಮಿಸಿದ ಶೌಚಗೃಹವನ್ನು ಉದ್ಘಾಟಿಸಲಾಯಿತು. ಪ್ರಮುಖರಾದ ಯಶ್‌ಪಾಲ್ ಎ.ಸುವರ್ಣ, ಉಮಾ ಪಿ., ಮಹವ್ಮಾಯ ಪ್ರಸಾದ್ ಮೊದಲಾದವರಿದ್ದರು.
ಸಂತೆಕಟ್ಟೆ ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆನರಾ ಬ್ಯಾಂಕ್ ಸಿಆರ್‌ಎಸ್ ಫಂಡ್‌ನಿಂದ ನಿರ್ಮಿಸಿದ ಶೌಚಗೃಹವನ್ನು ಉದ್ಘಾಟಿಸಲಾಯಿತು. ಪ್ರಮುಖರಾದ ಯಶ್‌ಪಾಲ್ ಎ.ಸುವರ್ಣ, ಉಮಾ ಪಿ., ಮಹವ್ಮಾಯ ಪ್ರಸಾದ್ ಮೊದಲಾದವರಿದ್ದರು.
Published on
ಕೊಕ್ಕರ್ಣೆ: ಶಿಕ್ಷಕರ ಪ್ರಾಮಾಣಿಕ ಪ್ರಯತ್ನದಿಂದ ಶಾಲೆ ಉನ್ನತಿ ಹೊಂದುತ್ತಿದೆ. ಶಾಲೆಯ ಅವಶ್ಯಕತೆ ಪೂರೈಸುವ ದಾನಿಗಳು, ಹಳೇ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಶಾಲೆ ಅಭಿವೃದ್ಧಿ ಹೊಂದುತ್ತಿದೆ ಎಂದು ಶಾಸಕ ಯಶ್‌ಪಾಲ್ ಎ.ಸುವರ್ಣ ಹೇಳಿದರು.
ಸಂತೆಕಟ್ಟೆ ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆನರಾ ಬ್ಯಾಂಕ್ ಸಿಆರ್‌ಎಸ್ ಫಂಡ್‌ನಿಂದ 2 ಲಕ್ಷ ರೂ. ದೇಣಿಗೆಯಲ್ಲಿ ನಿರ್ಮಾಣವಾದ ಶೌಚಗೃಹದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ದಾನಿ ಆರ್ಬೆಟ್ಟು ಸತೀಶ್ ಕಾಮತ್ ಇಂಟರ್‌ಲಾಕ್ ಅಳವಡಿಕೆಗೆ ಸಹಕರಿಸಿದ್ದು, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ಉದ್ಯಮಿಗಳಾದ ಸುಭಾಸ್ ಜೈನ್, ಏಕ್ತಾ ಜೈನ್ ಮತ್ತು ಸಂದೀಪ್ ನೀಡಿದರು. ವಿದ್ಯಾರ್ಥಿ ಸರ್ಕಾರದ ರಚನೆ, ಭಾರತ್ ಸೇವಾ ದಳ, ಬುಲ್ ಬುಲ್ ತಂಡದ ಪದಗ್ರಹಣ, ಮಕ್ಕಳ ಹಕ್ಕುಗಳ ಕ್ಲಬ್ ಉದ್ಘಾಟಿಸಲಾಯಿತು.
ಬ್ರಹ್ಮಾವರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಪಿ., ಕೆನರಾ ಬ್ಯಾಂಕ್ ಡಿಜಿಎಂ ಮಹಮ್ಮಾಯ ಪ್ರಸಾದ್, ಪ್ರಬಂಧಕ ರು ನಾಯಕ್, ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ಜಾರಿ, ಕಳ್ತೂರು ಗ್ರಾಪಂ ಆಡಳಿತಾಧಿಕಾರಿ ಸುಧಾಕರ ಶೆಟ್ಟಿ, ಪಿಡಿಒ ಸವಿತಾ ಎ.ಸಿ., ಪಂಚಾಯಿತಿ ನಿಕಟಪೂರ್ವ ಸದಸ್ಯ ಚಂದ್ರಶೇಖರ್ ಶೆಟ್ಟಿ, ಭಾರತ್ ಸೇವಾ ದಳ ಜಿಲ್ಲಾ ಸಂಟಕಿ ಪುಷ್ಪಲತಾ ಗೌಡ, ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಮೊದಲಾದವರಿದ್ದರು. ಮುಖ್ಯ ಶಿಕ್ಷಕ ಎಚ್.ರಾಮಾಂಜನೇಯ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ಚಂದ್ರಬಾಬು ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net