

ಮಕ್ಕಳ ಕೊರತೆಯಿಂದ 10 ವರ್ಷಗಳ ಹಿಂದೆ ಶಾಲೆ ಮುಚ್ಚಿದೆ. ಶಾಲಾ ಆಸ್ತಿ ನಿರ್ವಹಣೆ ಗ್ರಾಮ ಪಂಚಾಯಿತಿ ನೋಡಿಕೊಳ್ಳಬೇಕು. ಹಾಲಿ ಪರಿಸ್ಥಿತಿ ಸ್ಥಳೀಯಾಡಳಿತದ ಗಮನಕ್ಕೆ ತಂದಿದ್ದೇವೆ. ಶಾಲಾ ಕಟ್ಟಡದ ತೆರವಿಗೆ ಆದೇಶವೂ ಆಗಿದೆ.
ಬೈಂದೂರು ವಿಧಾನಸಭೆ ಕ್ಷೇತ್ರದ ಪ್ರಮುಖ ಮತಗಟ್ಟೆಯಾಗಿದ್ದ ಶಾಲೆಯ ಇಂದಿನ ಸ್ಥಿತಿ ಬೇಸರ ಮೂಡಿಸುತ್ತದೆ. ಶಾಲೆ ಉಳಿಸಲು ಆಗಲಿಲ್ಲ. ಕೊನೆ ಪಕ್ಷ ಆಸ್ತಿ ಪಾಸ್ತಿ ರಕ್ಷಣೆ ವಾಡಬೇಕಿತ್ತು. ಅದನ್ನು ಸಹ ನಿರ್ಲಕ್ಷಿಸಲಾಗಿದೆ. ಸಂಭವನೀಯ ದುರಂತ ತಡೆಯುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಎಚ್ಚೆತ್ತುಕೊಳ್ಳಬೇಕು.