

ಖಾಸಗಿಯಲ್ಲಿ ಸಾವಿರಾರು ರೂ. ಪಾವತಿಸಬೇಕಾಗುತ್ತದೆ ಎಂದು ಅನೇಕರು ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸುವುದಿಲ್ಲ. ವೈದ್ಯರು ಶಿಫಾರಸ್ಸು ಮಾಡಿದರಷ್ಟೇ ಸ್ಕಾೃನಿಂಗ್‌ನಂಥ ಪರೀಕ್ಷೆ ಮಾಡಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವೆಂದು ಅನಗತ್ಯವಾಗಿ ಮಾಡಿಸಿದರೆ ದೇಹಕ್ಕೆ ತೊಂದರೆಯಾಗುತ್ತದೆ. ಮುಂದಿನ ದಿನಗಳಲ್ಲಿ ಸಿಟಿ ಸ್ಕಾೃನ್ ಯಂತ್ರವೂ ದೊರೆತರೆ ಜನರಿಗೆ ಇನ್ನಷ್ಟು ಉಪಯೋಗವಾಗಲಿದೆ.
ಸಾರ್ವಜನಿಕ ಬೇಡಿಕೆಗೆ ಕ್ಯಾಂಪ್ಕೋ ಸ್ಪಂದಿಸಿದ್ದು, ಕುಂದಾಪುರ ಉಪವಿಭಾಗ ಆಸ್ಪತ್ರೆಗೆ ಅಲ್ಟ್ರಾಸೌಂಡ್ ಸ್ಕಾೃನಿಂಗ್ ಯಂತ್ರ ಹಸ್ತಾಂತರಿಸಿದೆ. ಕೆಲವೇ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಿದ್ದು, ಸಾರ್ವಜನಿಕರಿಗೆ ಇದರ ಪ್ರಯೋಜನ ದೊರೆಯಲಿದೆ.