ಹಣ ದುರ್ಬಳಕೆಯ ತನಿಖೆಗೆ ಸೂಚನೆ

ಉಡುಪಿಯ ಜಿಲ್ಲಾ ಪೊಲೀಸ್​ ಅಧೀಕ್ಷಕರ ಕಚೇರಿಯಲ್ಲಿ ನಡೆದ ಎಸ್​ಸಿ, ಎಸ್​ಟಿ ಸಮುದಾಯದವರ ಕುಂದು&ಕೊರತೆ ಸಭೆಯಲ್ಲಿ ಹರಿರಾಮ್​ ಶಂಕರ್​ ಮಾತನಾಡಿದರು. ಎಎಸ್ಪಿ ಸುಧಾಕರ್​ ನಾಯಕ್​ ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
ಉಡುಪಿಯ ಜಿಲ್ಲಾ ಪೊಲೀಸ್​ ಅಧೀಕ್ಷಕರ ಕಚೇರಿಯಲ್ಲಿ ನಡೆದ ಎಸ್​ಸಿ, ಎಸ್​ಟಿ ಸಮುದಾಯದವರ ಕುಂದು&ಕೊರತೆ ಸಭೆಯಲ್ಲಿ ಹರಿರಾಮ್​ ಶಂಕರ್​ ಮಾತನಾಡಿದರು. ಎಎಸ್ಪಿ ಸುಧಾಕರ್​ ನಾಯಕ್​ ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
Published on

* ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​ ಮಾಹಿತಿ

* ಎಸ್​ಸಿ, ಎಸ್​ಟಿ ಸಮುದಾಯದ ಕುಂದು-ಕೊರತೆ ಸಭೆ

ಉಡುಪಿ: ಜಿಲ್ಲೆಯಲ್ಲಿ ಎಸ್​ಸಿ, ಎಸ್​ಟಿ ಸಮುದಾಯದವರು ಪ್ರಕರಣ ದಾಖಲಿಸಿದಾಗ ನ್ಯಾಯಯುತವಾಗಿ ಪರಿಹಾರ ದೊರೆಯುತ್ತಿಲ್ಲ ಎಂಬ ದೂರು ಇದೆ. ಅಲ್ಲದೆ, ಶಂಕರನಾರಾಯಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ದಲಿತರ ಏಳಿಗೆಗೆ ಸರ್ಕಾರದಿಂದ ನೀಡಲಾದ ಹಣ ದುರ್ಬಳಕೆ ಆಗಿರುವ ಕುರಿತು ಮಾಹಿತಿ ನೀಡಿದ್ದೀರಿ. ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಕುರಿತು ಸಮಾಜ ಕಲ್ಯಾಣ ಇಲಾಖೆಯವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ತಿಳಿಸಿದರು.
ಉಡುಪಿಯ ಜಿಲ್ಲಾ ಪೊಲೀಸ್​ ಅಧೀಕ್ಷಕರ ಕಚೇರಿಯಲ್ಲಿ ಶನಿವಾರ (ಜು.18) ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದರು.

ವಿವಿಧ ಬೇಡಿಕೆಯಿಟ್ಟ ಮುಖಂಡರು

ಸಭೆಯಲ್ಲಿ ಪಾಲ್ಗೊಂಡಿದ್ದ ಸಮುದಾಯದ ಮುಖಂಡರು ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಸಮುದಾಯದವರು ಎದುರಿಸುವ ಸಮಸ್ಯೆಗೆ ಸಂಬಂಧಿಸಿ ಪೊಲೀಸ್​ ಇಲಾಖೆಯವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇದೇ ರೀತಿಯ ಸಹಕಾರ ಮುಂದುವರಿಯಲಿ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಲಿರುವ ವಿಜಿಲೆನ್ಸ್​ ಕಮಿಟಿಯ ಸದಸ್ಯರನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದರು.
ಡಿಸಿಆರ್​ಇ ಠಾಣೆಯಲ್ಲಿಲ್ಲ ಸಿಬ್ಬಂದಿ
ತಮಿಳುನಾಡು ಮೂಲದವರು ಉಡುಪಿಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಬಗ್ಗೆ ನಾವು ದೂರು ನೀಡಿದ್ದು, ಡಿಸಿಆರ್​ಇ ಪೊಲೀಸ್​ ಠಾಣೆಯವರು ಕ್ರಮ ಕೈಗೊಳ್ಳಬೇಕು. ದಲಿತರಿಗೆ ಸಹಾಯವಾಗಲು ಪ್ರತಿಯೊಂದು ಜಿಲ್ಲೆಯಲ್ಲೂ ಡಿಸಿಆರ್​ಇ ಠಾಣೆ ಸ್ಥಾಪನೆಯಾಗಿದೆ. ಆದರೆ, ಸೂಕ್ತ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕವಾಗಿಲ್ಲ. ಇದರಿಂದ ದಲಿತ ಸಮುದಾಯಕ್ಕೆ ನ್ಯಾಯ ಲಭಿಸಲು ವಿಳಂಬವಾಗುತ್ತಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಬೇಕು ಎಂದು ಅಹವಾಲು ಸಲ್ಲಿಸಿದರು.

ಕೋರ್ಟ್​ನಿಂದ ತಡೆಯಾಜ್ಞೆ

ಎಸ್​ಸಿ, ಎಸ್​ಟಿ ಪ್ರಕರಣದಲ್ಲಿ ಆರೋಪಿತರು ನ್ಯಾಯಾಲಯದ ತಡೆ ಆಜ್ಞೆ ತರುತ್ತಿದ್ದಾರೆ. ಅದನ್ನು ತೆರವುಗೊಳಿಸುವ ಬಗ್ಗೆ ಡಿಸಿಆರ್​ಇ ಠಾಣೆಯವರು ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಿಸಿಆರ್​ಇ ಠಾಣೆಯವರು ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಸುಧಾಕರ್​ ನಾಯ್ಕ್​ ಹಾಗೂ ಹಿರಿಯ ಪೊಲೀಸ್​ ಅಧಿಕಾರಿಗಳು, ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 53 ಮುಖಂಡರು ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net