ಎಸ್​ಬಿಐನಿಂದ 40 ಲಕ್ಷ ರೂ. ವಿಮೆ ಹಸ್ತಾಂತರ

ಅಪಘಾತದಲ್ಲಿ ಮೃತಪಟ್ಟಿದ್ದ ಗ್ರಾಹಕನ ತಾಯಿಗೆ ಎಸ್​ಬಿಐ ವತಿಯಿಂದ 40 ಲಕ್ಷ ರೂ. ವಿಮೆ ಹಸ್ತಾಂತರಿಸಲಾಯಿತು. ಪ್ರಕಾಶ್​ ಬಿ. ಅಡಿಗ, ಕೀಳಂಜೆ ಕೃಷ್ಣರಾಜ ಭಟ್​, ಆದಿತ್ಯ, ಅಕ್ಷಯ್​, ರಾಜೇಶ್​ ಗಂಗೊಳ್ಳಿ ಇತರರಿದ್ದರು.
ಅಪಘಾತದಲ್ಲಿ ಮೃತಪಟ್ಟಿದ್ದ ಗ್ರಾಹಕನ ತಾಯಿಗೆ ಎಸ್​ಬಿಐ ವತಿಯಿಂದ 40 ಲಕ್ಷ ರೂ. ವಿಮೆ ಹಸ್ತಾಂತರಿಸಲಾಯಿತು. ಪ್ರಕಾಶ್​ ಬಿ. ಅಡಿಗ, ಕೀಳಂಜೆ ಕೃಷ್ಣರಾಜ ಭಟ್​, ಆದಿತ್ಯ, ಅಕ್ಷಯ್​, ರಾಜೇಶ್​ ಗಂಗೊಳ್ಳಿ ಇತರರಿದ್ದರು.
Published on

* ಅಪಘಾತದಲ್ಲಿ ಮೃತಪಟ್ಟಿದ್ದ ಗ್ರಾಹಕ

ಉಡುಪಿ: ಅಪಘಾತದಲ್ಲಿ ಮೃತಪಟ್ಟಿದ್ದ ಮಲ್ಪೆಯ ಗ್ರಾಹಕರೋರ್ವರ ಕುಟುಂಬಕ್ಕೆ ಭಾರತೀಯ ಸ್ಟೇಟ್​ ಬ್ಯಾಂಕ್​ 40 ಲಕ್ಷ ರೂ. ಅಪಘಾತ ವಿಮೆ ನೀಡಿದೆ. ಮಲ್ಪೆಯಲ್ಲಿ ಕೋಸ್ಟಲ್​ ಸೆಕ್ಯೂರಿಟಿಯ ಸಿಬ್ಬಂದಿಯಾಗಿದ್ದ ಅರ್ಜುನ್​ ನೆಲ್ಲೂರು ಎಂಬವರು ಅಪಘಾತದಲ್ಲಿ ಮೃತಪಟ್ಟಿದ್ದರು.
ಎಸ್​ಬಿಐನ ಮಲ್ಪೆ ಶಾಖೆಯಲ್ಲಿ ಅರ್ಜುನ್​ ಅವರ ತಾಯಿ ರೇಣುಕಾ ಶಂಕರಪ್ಪ ನೆಲ್ಲೂರು ಅವರಿಗೆ ಬ್ಯಾಂಕ್​ನ ಉಡುಪಿಯ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್​ ಬಿ. ಅಡಿಗ ಚೆಕ್​ ಹಸ್ತಾಂತರಿಸಿದರು. 
ಎಲ್ಲ ಗ್ರಾಹಕರು ತಮಗೆ ಅನುಕೂಲವಾಗುವ ವಿಮೆಯನ್ನು ಎಸ್​ಬಿಐನಲ್ಲಿ ಮಾಡಿಸಿಕೊಳ್ಳಬೇಕು. ಇದರಿಂದ ಅವರ ಕುಟುಂಬಕ್ಕೆ ಆರ್ಥಿಕ ಸಹಕಾರ ಲಭಿಸಿದಂತಾಗುತ್ತದೆ. ನಮ್ಮ ಯಾವುದೇ ಶಾಖೆಯ ವ್ಯವಸ್ಥಾಪಕರಲ್ಲಿ ಕೇಳಿ ಅಪಘಾತ ವಿಮೆ ಮಾಡಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದು ಅಭಿಪ್ರಾಯಪಟ್ಟರು.
ಎಸ್​ಬಿಐನ ಮುಖ್ಯ ವ್ಯವಸ್ಥಾಪಕ ಕೀಳಂಜೆ ಕೃಷ್ಣರಾಜ ಭಟ್​, ಎಸ್​ಬಿಐ ಜನರಲ್​ ಇನ್ಶೂರೆನ್ಸ್​ ಕಂಪನಿಯ ಆದಿತ್ಯ, ಅಕ್ಷಯ್​, ಮಲ್ಪೆ ಶಾಖೆಯ ಮೆನೇಜರ್​ ರಾಜೇಶ್​ ಗಂಗೊಳ್ಳಿ ಮತ್ತು ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net