ಶಾಲೆ, ದೇವಳಗಳಿಂದ ಊರಲ್ಲಿ ಸಾತ್ವಿಕತೆ ನೆಲೆ

ಗುಜ್ಜಾಡಿ ಗ್ರಾಮದ ನಾಯಕವಾಡಿಯ ಬಿಲ್ಲವರ ಸಮಾಜ ಸೇವಾ ಸಂಘ ಶ್ರೀರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ತಾಲೂಕು ಭಜನಾ ಒಕ್ಕೂಟ ಅಧ್ಯಕ್ಷ ನಿತಿನ್ ವಿಠಲವಾಡಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಡಾ.ಉಮೇಶ್ ಪುತ್ರನ್, ಅಶೋಕ್ ಪೂಜಾರಿ ಬೀಜಾಡಿ, ನಾರಾಯಣ ಟಿ.ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಗುಜ್ಜಾಡಿ ಗ್ರಾಮದ ನಾಯಕವಾಡಿಯ ಬಿಲ್ಲವರ ಸಮಾಜ ಸೇವಾ ಸಂಘ ಶ್ರೀರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ತಾಲೂಕು ಭಜನಾ ಒಕ್ಕೂಟ ಅಧ್ಯಕ್ಷ ನಿತಿನ್ ವಿಠಲವಾಡಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಡಾ.ಉಮೇಶ್ ಪುತ್ರನ್, ಅಶೋಕ್ ಪೂಜಾರಿ ಬೀಜಾಡಿ, ನಾರಾಯಣ ಟಿ.ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಆಧುನಿಕ ಕಾಲಘಟ್ಟದಲ್ಲಿ ಪಾಶ್ಚಿಮಾತ್ಯ ವ್ಯವಸ್ಥೆಯಿಂದ ಮೂಲ ಸಂಸ್ಕೃತಿ ಮರೆಯಬಾರದು. ಈ ನಿಟ್ಟಿನಲ್ಲಿ ಭಜನೆಯಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಶಾಲೆ ಹಾಗೂ ದೇವಸ್ಥಾನಗಳಿಂದ ಊರಿನಲ್ಲಿ ಸಾತ್ವಿಕತೆ ನೆಲೆಸುತ್ತದೆ ಎಂದು ಕುಂದಾಪುರ ಚಿನ್ಮಯಿ ಆಸ್ಪತ್ರೆ ್ಯವಸ್ಥಾಪಕ ನಿರ್ದೇಶಕ ಡಾ.ಉಮೇಶ್ ಪುತ್ರನ್ ಹೇಳಿದರು.
ಗುಜ್ಜಾಡಿ ಗ್ರಾಮದ ನಾಯಕವಾಡಿಯ ಬಿಲ್ಲವರ ಸಮಾಜ ಸೇವಾ ಸಂಘ ಶ್ರೀರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣಗುರು ಮಂದಿರದ 50ರ ಸಂಭ್ರಮಾಚರಣೆ ಸುವರ್ಣ ಸಂಭ್ರಮ ಹಾಗೂ ಸೀತಾರಾಮಚಂದ್ರ ಕಲ್ಯಾಣೋತ್ಸವ ಪ್ರಯುಕ್ತ ಶುಕ್ರವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಂದಾಪುರ ಬಿಲ್ಲವ ಸಂಘ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿದರು. ಶ್ರೀರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅಧ್ಯಕ್ಷ ನಾರಾಯಣ ಟಿ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಭಜನಾ ಒಕ್ಕೂಟ ಅಧ್ಯಕ್ಷ ನಿತಿನ್ ವಿಠಲವಾಡಿ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿಗಳಾದ ಶಿವ ಆರ್.ಪೂಜಾರಿ, ವೀರೇಶ್ ಪೂಜಾರಿ ಹೆಮ್ಮಾಡಿ, ಸತೀಶ್ ಪೂಜಾರಿ ಮರವಂತೆ, ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ನಾಯಕವಾಡಿ ಶ್ರೀ ಸಂಗಮೇಶ್ವರ ದೇವಸ್ಥಾನ ಅಧ್ಯಕ್ಷ ರಘುರಾಮ ಎಚ್., ಮರವಂತೆ ಬಿಲ್ಲವ ಸಂಘ ಅಧ್ಯಕ್ಷ ಗಣೇಶ್ ಪೂಜಾರಿ, ಪಡುಕೋಣೆ ಶ್ರೀರಾಮ ದೇವಸ್ಥಾನ ಅಧ್ಯಕ್ಷ ರಾಮ ಪೂಜಾರಿ, ಗಂಗೊಳ್ಳಿ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಗೋಪಾಲ ಬಿಲ್ಲವ, ಗುಜ್ಜಾಡಿ ಪಿಡಿಒ ಶೋಭಾ ರಮೇಶ್, ದೇವಸ್ಥಾನದ ಅರ್ಚಕ ರಾಮಚಂದ್ರ ಕಾರಂತ ಮೊದಲಾದವರಿದ್ದರು. ಸುವರ್ಣ ಮಹೋತ್ಸವ ಸಮಿತಿ ಖಜಾಂಚಿ ಪ್ರಕಾಶ್ ಪೂಜಾರಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶೇಖರ್ ಪೂಜಾರಿ ಪ್ರಸ್ತಾವನೆಗೈದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು. ಗ್ರಾಪಂ ಮಾಜಿ ಸದಸ್ಯ ರಾಜು ಎನ್.ಪೂಜಾರಿ ವಂದಿಸಿದರು.

ಆಧುನಿಕ ವ್ಯವಸ್ಥೆಯ ಹೊಡೆತಕ್ಕೆ ಸಿಕ್ಕು ಪುರಾತನ ಪರಂಪರೆಗಳು ನಶಿಸುತ್ತಿರುವ ಕಾಲಘಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿ ಊರಿನಲ್ಲಿ ನಡೆಯಬೇಕು. ಆದರ್ಶ ಪುರುಷ, ಮರ್ಯಾದಾ ಪುರುಷ ಶ್ರೀರಾಮನ ಸೇವೆ ಪ್ರಸ್ತುತ ಅಗತ್ಯ. ಭಜನೆಯು ದೇವರು ಮತ್ತು ಮನುಷ್ಯನ ನಡುವೆ ಬೆಸೆಯುವ ಕೊಂಡಿಯಾಗಿದ್ದು, ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net