ಜಗತ್ತಿನ ಎಲ್ಲ ಭಾಷೆಗಳಿಗೆ ಸಂಸ್ಕೃತ ಆಧಾರ

 ಹೆಬ್ರಿ ಪಿ.ಆರ್.ಎನ್. ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸಂಸ್ಕೃತ ಸಂಭಾಷಣಾ ಶಿಬಿರದ ಸವಾರೋಪ ಸವಾರಂಭ ನಡೆಯಿತು. ಪ್ರಮುಖರಾದ ಗುರುದಾಸ್ ಶೆಣೈ, ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ, ಬಾಲಕೃಷ್ಣ ಮಲ್ಯ, ಸಂಸ್ಥೆ ಮುಖ್ಯಸ್ಥ ಅರುಣ್ ಎಚ್.ವೈ. ಮೊದಲಾದವರಿದ್ದರು.

Published on
ಹೆಬ್ರಿ: ಭಾರತದ ವಿವಿಧ ರಾಜ್ಯಗಳ ಭಾಷೆಗಳಲ್ಲಿ ಶೇ.70ರಷ್ಟು ಸಂಸ್ಕೃತ ಪದಗಳಿವೆ. ಇತ್ತೀಚಿನ ಸಂಶೋಧನೆಯಂತೆ ಆಂಗ್ಲ ಭಾಷೆಯಲ್ಲಿ 80,000 ಸಂಸ್ಕೃತ ಪದಗಳಿವೆ. ಆದ್ದರಿಂದ ಜಗತ್ತಿನ ಎಲ್ಲ ಭಾಷೆಗಳಿಗೆ ಸಂಸ್ಕೃತವೇ ಆಧಾರ ಎಂದು ಶೃಂಗೇರಿ ರಾಜೀವಗಾಂಧಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪನ್ಯಾಸಕ ಹರಿಪ್ರಸಾದ್ ಕೆ. ಹೇಳಿದರು.
ಹೆಬ್ರಿ ಪಿ.ಆರ್.ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹತ್ತು ದಿನಗಳ ಕಾಲ ನಡೆದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಸ್ಕೃತ ಶಿಕ್ಷಕ ವೇದವ್ಯಾಸ ತಂತ್ರಿ ಮಡಾಮಕ್ಕಿ ವಾತನಾಡಿದರು. ವಿದ್ಯಾರ್ಥಿಗಳಿಂದ ಸಂಸ್ಕೃತ ಗೀತೆ, ಲು ನಾಟಕ, ಸಂಭಾಷಣೆ ಇತ್ಯಾದಿ ಕಾರ್ಯಕ್ರಮಗಳು ನಡೆಯಿತು.
ಅಮೃತ ಭಾರತಿ ಟ್ರಸ್ಟ್‌ನ ಬಾಲಕೃಷ್ಣ ಮಲ್ಯ, ಸಂಸ್ಥೆ ಮುಖ್ಯಸ್ಥರಾದ ಅರುಣ್ ಎಚ್.ವೈ., ಅಪರ್ಣಾ ಆಚಾರ್, ಶಕುಂತಲಾ, ಸಂಸ್ಕೃತ ಭಾರತಿಯ ವಿಶ್ವಕ್ಸೇನ, ಶ್ರೀಜಾ ಉದನೇಶ್, ಅಖಿಲಾ ಕೆ., ಪ್ರಣಮ್ಯಾ ಕೆ. ಹಾಗೂ ವಿದ್ಯಾಕೇಂದ್ರದ ಸಂಸ್ಕೃತ ಶಿಕ್ಷಕಿ ಐಶ್ವರ್ಯಾ ಲಕ್ಷ್ಮೀ ಇದ್ದರು. ಪ್ರತಿಷ್ಠಾ ಸ್ವಾಗತಿಸಿದರು. ಸಾನ್ವಿ ವಂದಿಸಿದರು. ಪ್ರಣಮ್ಯಾ ಕೆ. ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net