ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ್ಣ ಮತ್ತು ಡಾ.ಭಾರತಿ ದಂಪತಿ ಸನ್ಮಾನಿಸಿದರು. ಡಾ.ಗೋಪಾಲಕೃಷ್ಣ ಮಾತನಾಡಿ, 7 ಹಾಸಿಗೆಗಳಿಂದ ಪ್ರಾರಂಭಿಸಿದ ನಮ್ಮ ಬೆನಕ ಆಸ್ಪತ್ರೆ ಪ್ರಸ್ತುತ 130 ಹಾಸಿಗೆಗಳನ್ನು ಹೊಂದಿದ್ದು ಇದು ಕೇವಲ ನನ್ನೊಬ್ಬನ ಸಾಧನೆಯಲ್ಲ. ನಮ್ಮ ತಾಲೂಕಿನ ಮತ್ತು ಸುತ್ತಲಿನ ಪರಿಸರದ ಬಂಧುಗಳು, ತಾಲೂಕಿನ ವೈದ್ಯರು, ಕುಟುಂಬದ ಸದಸ್ಯರು ಮತ್ತು ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳ ಪ್ರೋತ್ಸಾಹದಿಂದ ಸಾಧ್ಯವಾಯಿತು ಎಂದರು.