ಎಲ್ಲರಿಗೂ ಅತ್ಯಗತ್ಯ ಬ್ಯಾಂಕ್​ ಖಾತೆ

ಉಡುಪಿಯ ಅಂಬಾಗಿಲಿನಲ್ಲಿ ಆರಂಭಗೊಂಡ ಎಸ್​ಬಿಐ ಶಾಖೆಯನ್ನು ಉದ್ಘಾಟಿಸಿದರು. ಸಂಜಯ್​ ಕುಮಾರ್​ ಝಾ, ಕೃಷ್ಣಮೋಹನ್​ ಮುಚರ್ಲ, ಬಿ. ಪ್ರಕಾಶ್​ ಅಡಿಗ, ಕೀಳಂಜೆ ಕೃಷ್ಣರಾಜ ಭಟ್​, ಅನಿಲ್​ ಕುಮಾರ್​, ಅಭಯಲಾಲ್​ ದಾಸ್​, ಜಗದೀಶ್​ ಕಾಮತ್​, ಶ್ರೀನಿವಾಸ ಎಂ.ವಿ., ಬಾಲಚಂದ್ರ ಹೆಬ್ಬಾರ್​, ರೋಹಿಣಿ ಕಿಣಿ ಇದ್ದರು.
ಉಡುಪಿಯ ಅಂಬಾಗಿಲಿನಲ್ಲಿ ಆರಂಭಗೊಂಡ ಎಸ್​ಬಿಐ ಶಾಖೆಯನ್ನು ಉದ್ಘಾಟಿಸಿದರು. ಸಂಜಯ್​ ಕುಮಾರ್​ ಝಾ, ಕೃಷ್ಣಮೋಹನ್​ ಮುಚರ್ಲ, ಬಿ. ಪ್ರಕಾಶ್​ ಅಡಿಗ, ಕೀಳಂಜೆ ಕೃಷ್ಣರಾಜ ಭಟ್​, ಅನಿಲ್​ ಕುಮಾರ್​, ಅಭಯಲಾಲ್​ ದಾಸ್​, ಜಗದೀಶ್​ ಕಾಮತ್​, ಶ್ರೀನಿವಾಸ ಎಂ.ವಿ., ಬಾಲಚಂದ್ರ ಹೆಬ್ಬಾರ್​, ರೋಹಿಣಿ ಕಿಣಿ ಇದ್ದರು.
Published on

* ಸಂಜಯ್​ ಕುಮಾರ್​ ಝಾ ಅಭಿಪ್ರಾಯ

* ಅಂಬಾಗಿಲಿನಲ್ಲಿ ಎಸ್​ಬಿಐ ಶಾಖೆ ಉದ್ಘಾಟನೆ

ಉಡುಪಿ: ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲ ಜನಸಾಮಾನ್ಯರಿಗೂ ಹಣಕಾಸು ನಿರ್ವಹಣೆ ಮಾಡಲು ಬ್ಯಾಂಕ್​ಗಳಲ್ಲಿ ಖಾತೆಯ ಅವಶ್ಯಕತೆ ಇರುತ್ತದೆ. ದುಡಿದ ಹಣ ಠೇವಣಿ ಮಾಡಲು ಅಥವಾ ಉದ್ದೇಶಿತ ಅಗತ್ಯ ಕಾರ್ಯಗಳಿಗಾಗಿ ಸಾಲದ ನೆರವು ಪಡೆಯಲೂ ಸಹ ಬ್ಯಾಂಕ್​ನ ಅಗತ್ಯತೆ ಇರುತ್ತದೆ ಎಂದು ಎಸ್​ಬಿಐ ಬೆಂಗಳೂರು ವೃತ್ತದ ನೆಟ್​ವರ್ಕ್​-3ರ ಜನರಲ್​ ಮೆನೇಜರ್​ ಸಂಜಯ್​ ಕುಮಾರ್​ ಝಾ ಅಭಿಪ್ರಾಯಪಟ್ಟರು.
ಉಡುಪಿ ತಾಲೂಕಿನ ಅಂಬಾಗಿಲು ರಸ್ತೆ ಮಾರ್ಗದಲ್ಲಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಆಡಳಿತ ಕಚೇರಿಯ ಡೆಪ್ಯುಟಿ ಜನರಲ್​ ಮೆನೇಜರ್​ ಕೃಷ್ಣಮೋಹನ್​ ಮುಚರ್ಲ ಅವರು ಶಾಖೆಯ ಫಲಕ ಅನಾವರಣಗೊಳಿಸಿದರು. ಹಿರಿಯ ಗ್ರಾಹಕ ವಾಸುದೇವ್​ ಹಾಗೂ ಕಟ್ಟಡದ ಮಾಲೀಕರಾದ ರೋಹಿಣಿ ಕಿಣಿ ಅವರನ್ನು ಗೌರವಿಸಲಾಯಿತು. 
ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಕೀಳಂಜೆ ಕೃಷ್ಣರಾಜ ಭಟ್​, ಅನಿಲ್​ ಕುಮಾರ್​, ಅಭಯಲಾಲ್​ ದಾಸ್​, ಜಗದೀಶ್​ ಕಾಮತ್​, ಶ್ರೀನಿವಾಸ ಎಂ.ವಿ., ಪ್ರಾದೇಶಿಕ ಕಚೇರಿಯ ಇನ್ನಿತರ ಅಧಿಕಾರಿಗಳು, ಸಮೀಪದ ಶಾಖೆಗಳ ಸಿಬ್ಬಂದಿ, ಸ್ಥಳೀಯ ಗಣ್ಯರು, ಗ್ರಾಹಕರು ಹಾಗೂ ಬ್ಯಾಂಕ್​ನ ಸಿಬ್ಬಂದಿ ಉಪಸ್ಥಿತರಿದ್ದರು.
ಮುರಳೀಧರ್​ ಕುಂಜಿಬೆಟ್ಟು ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕ ಬಾಲಚಂದ್ರ ಹೆಬ್ಬಾರ್​ ಸ್ವಾಗತಿಸಿದರು. ಮನಿಷಾ ಕಾರ್ಯಕ್ರಮ ನಿರ್ವಹಿಸಿದರು.
"

ಉಡುಪಿಯ ಅಂಬಾಗಿಲಿನಲ್ಲಿ ಆರಂಭಗೊಂಡ ಎಸ್​ಬಿಐನ ಈ ನೂತನ ಶಾಖೆ ಸುತ್ತಮುತ್ತಲಿನ ನಿವಾಸಿಗಳಿಗೆ ಆಧುನಿಕ ಬ್ಯಾಂಕಿಂಗ್​ ಸೇವೆ ಒದಗಿಸಲಿದೆ. ಇಲ್ಲಿನ ಗ್ರಾಹಕರಿಗೂ ಹತ್ತಿರದಲ್ಲಿ, ತ್ವರಿತ ಹಾಗೂ ಸುರಕ್ಷಿತವಾದ ಬ್ಯಾಂಕಿಂಗ್​ ಸೇವೆ ಒದಗಿಸಲು ಈ ಶಾಖೆ ಬದ್ಧವಾಗಿರಲಿದೆ.

— ಬಿ. ಪ್ರಕಾಶ್​ ಅಡಿಗ. ಎಸ್​ಬಿಐ ಉಡುಪಿ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net