ಸಾಂಸ್ಕೃತಿಕ, ವಿವಿಧ ಕಲೆಗಳಿಂದ ಮನಸ್ಸಿಗೆ ನೆಮ್ಮದಿ

ಉಡುಪಿಯಲ್ಲಿ ಸುಹಾಸಂ ಸಂಸ್ಥೆಯ ವತಿಯಿಂದ 'ಸಂಗೀತ ಧಾರಾ' ಕಾರ್ಯಕ್ರಮ ನಡೆಯಿತು. ಸಂಧ್ಯಾ ಶೆಣೈ, ವಿದ್ಯಾರಾಣಿ, ಉದಯಕುಮಾರ್​ ನಾಯಕ್​, ರಾಮಚಂದ್ರ ರಾವ್​, ಸಿ.ಎಸ್​. ರಾವ್​, ಕೃಷ್ಣಮೂರ್ತಿ ರಾವ್​, ಸರೋಜಾ ಆಚಾರ್ಯ, ಮುರಳೀಧರ್​ ಕೆ., ಸದಾಶಿವ್​ ರಾವ್​, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಇದ್ದರು.

Published on

* ಸುಹಾಸಂ ಅಧ್ಯಕ್ಷೆ ಸಂಧ್ಯಾ ಶೆಣೈ ಅನಿಸಿಕೆ

* 'ನಿನಾದನ' ತಂಡದಿಂದ ಸಂಗೀತ ಧಾರಾ 

ಉಡುಪಿ: ಯಾಂತ್ರೀಕೃತ ಬದುಕಿನಲ್ಲಿ ಹಾಗೂ ನಿತ್ಯದ ಜಂಜಡಗಳ ಮಧ್ಯದಲ್ಲಿ ಮನಸ್ಸಿಗೆ ನೆಮ್ಮದಿ ಸಿಗದಾಗಿದೆ. ಇಂತಹ ಸಂದರ್ಭದಲ್ಲಿ ಸಂಗೀತ, ಸಾಹಿತ್ಯ, ವಿವಿಧ ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಅದೇ ಮನಸ್ಸಿಗೆ ನೆಮ್ಮದಿ, ಮುದ ಲಭಿಸುತ್ತದೆ ಎಂದು ಸುಹಾಸಂ ಉಡುಪಿ ಸಂಸ್ಥೆಯ ಅಧ್ಯಕ್ಷೆ ಸಂಧ್ಯಾ ಶೆಣೈ ಅಭಿಪ್ರಾಯಪಟ್ಟರು.
ಉಡುಪಿಯ ಕಿದಿಯೂರು ಹೋಟೆಲ್​ನ ಮಾಧವ ಕೃಷ್ಣ ಸಭಾಂಗಣದಲ್ಲಿ ಹಾಸ್ಯಪ್ರಿಯರು ಮತ್ತು ಲೇಖಕರ ಸಂಘಟನೆಯಾದ ಸುಹಾಸಂ ಉಡುಪಿ ಸಂಸ್ಥೆಯ ವತಿಯಿಂದ ಶನಿವಾರ (ಜು.25) ಸಂಜೆ ಆಯೋಜಿಸಿದ್ದ ಉಡುಪಿ ಪರಿಸರದ ಸುಮಧುರ ಹಾಡುಗಾರರಿರುವ 'ನಿನಾದನ' ತಂಡದ 'ಸಂಗೀತ ಧಾರಾ' ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿನಾದನ ಸಂಸ್ಥೆಯ ಸಂಸ್ಥಾಪಕಿ ವಿದ್ಯಾರಾಣಿ ಹಾಗೂ ಉದಯಕುಮಾರ್​ ನಾಯಕ್​ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ರಾಮಚಂದ್ರ ರಾವ್​, ಸಿ.ಎಸ್​. ರಾವ್​, ಕೃಷ್ಣಮೂರ್ತಿ ರಾವ್​ ಉಪಸ್ಥಿತರಿದ್ದರು.
ವಿದುಷಿ ಸರೋಜಾ ಆಚಾರ್ಯ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಮುರಳೀಧರ್​ ಕೆ. ಸ್ವಾಗತಿಸಿದರು. ಖಜಾಂಚಿ ಸದಾಶಿವ್​ ರಾವ್​ ವಂದಿಸಿದರು. ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net