ಕಾಸರಗೋಡು: ಮೊಗ್ರಾಲ್ ಸೇತುವೆ ಸನಿಹ ಕುಂಬಳೆ ಠಾಣೆ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೊಗ್ರಾಲ್ ಹೊಳೆಯಿಂದ ಅನಧಿಕೃತವಾಗಿ ಸಾಗಿಸುತ್ತಿದ್ದ ಮರಳು ವಶಪಡಿಸಿಕೊಳ್ಳಲಾಗಿದೆ.
ಮರಳು ಸಾಗಾಟಕ್ಕೆ ಯತ್ನಿಸಿದ ಓಮ್ನಿ ವಾಹನ ವಶಪಡಿಸಿಕೊಂಡಿರುವ ಪೊಲೀಸರು, ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ. ಮೊಬೈಲ್ ಫೋನ್ ಹಾಗೂ ಕೆಲವೊಂದು ದಾಖಲೆಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.