ಮಂತ್ರಕ್ಕಿದೆ ಭಗವಂತನ ಜೊತೆ ಸಂವಾದ ಶಕ್ತಿ: ಪಲಿಮಾರು ಶ್ರೀ

ಸಮಂತ್ರ ಪೂಜಾ ಕಲ್ಪ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು
ಸಮಂತ್ರ ಪೂಜಾ ಕಲ್ಪ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು
Published on
ಉಡುಪಿ: ಶಿಲೆಯಲ್ಲಿಯೂ ಸನ್ನಿಹಿತನಾದ ಭಗವಂತನನ್ನು ಮಾತನಾಡುವಂತೆ ಮಾಡಬಹುದು, ಅಂತಹ ದಿವ್ಯಶಕ್ತಿ ಮಂತ್ರಗಳಲ್ಲಿವೆ ಎಂದು ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಕೊಡವೂರಿನ ವಿಪ್ರಶ್ರೀ ಸಭಾಭವನದಲ್ಲಿ ಮುದ್ರಾಡಿ ಭಕ್ರೇಮಠ ಸಂತೋಷ್ ಕುಮಾರ್ ಭಟ್ ಪ್ರಕಟಿಸಿರುವ ಸಮಂತ್ರಪೂಜಾಕಲ್ಪ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಫಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಮಾತನಾಡಿ, ಮಂತ್ರಗಳನ್ನು ಅನುಷ್ಠಾನದ ಮೂಲಕ ರಕ್ಷಿಸಿದರೆ ಮಂತ್ರಗಳು ನಮ್ಮನ್ನು ರಕ್ಷಿಸುತ್ತವೆ. ಆದ್ದರಿಂದ ಮಂತ್ರಗಳ ಅನುಷ್ಠಾನದಲ್ಲಿ ಯಾವಾಗಲೂ ನಿರತರಾಗಿರಬೇಕು ಎಂದರು.
ವಿದ್ವಾನ್ ಪಂಜ ಭಾಸ್ಕರ ಭಟ್ , ವಿದ್ವಾನ್ ಅವಧಾನಿ ಸುಬ್ರಹ್ಮಣ್ಯ ಭಟ್, ಡಾ. ಅಮೃತೇಶಾಚಾರ್ಯ ಡಿ. ಎಸ್. ಕೊಡವೂರು ಲಕ್ಷ್ಮೀನಾರಾಯಣ ಭಟ್ ಹಾಗೂ ಪಡುಬಿದ್ರಿ ಕೃಷ್ಣಾಪುರ ಮಠದ ಶ್ರೀನಿವಾಸ ಉಪಾಧ್ಯಾಯ ಮತ್ತು ಚೆನ್ನೈ ಚಂದ್ರಾವತಿ ರಾಘವೇಂದ್ರರಾವ್ ದಂಪತಿ ಉಪಸ್ಥಿತರಿದ್ದರು.
ವಿದ್ವಾನ್ ಶ್ರೀರಮಣ ಕಲ್ಕೂರ್ ಮುದ್ರಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಬ್ರಹ್ಮಣ್ಯ ಕಾರಂತ ಮಂಗಲಮಂತ್ರಘೋಷ ಮಾಡಿದರು. ಗ್ರಂಥಕರ್ತೃಗಳಾದ ಭಕ್ರೇಮಠ ಸಂತೋಷ ಕುಮಾರ ಭಟ್ ವಂದಿಸಿದರು.
"

ಸನಾತನ ಆರಾಧನಾ ಪದ್ಧತಿ ಅನೇಕ ಮುಖಗಳಲ್ಲಿ ತೆರೆದುಕೊಂಡಿದೆ. ಪುರೋಹಿತ ವರ್ಗಕ್ಕೆ ಅಗತ್ಯವಾಗಿರುವ ಎಲ್ಲಾ ಮಾಹಿತಿಗಳನ್ನು ಸಂಗ್ರಹಾತ್ಮಕವಾಗಿ ನೀಡುವಲ್ಲಿ ಯಶಸ್ವಿಯಾಗಿರುವ *ಸಮಂತ್ರಪೂಜಾಕಲ್ಪ* ಎಂಬ ಸಂಕಲನಾತ್ಮಕವಾಗಿರುವ ಕೃತಿಯು ಮಂತ್ರಗ್ರಂಥಪ್ರಪಂಚಕ್ಕೆ ಅಪೂರ್ವವಾದ ಕೊಡುಗೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net