ಪಡುಬಿದ್ರಿ: ಕಾಪು ತಾಲೂಕು ಬಡಾ ಗ್ರಾಮದ ಎರ್ವಾಳಿನ ಅನೀಲಾ ಪಾನ್ ಸ್ಟಾಲ್‌ನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಗೋಲಿಗಳನ್ನು ಮಾರಾಟ ಮಾಡುತ್ತಿದ್ದ ಅನಿಲ್ ಎಂಬಾತನನ್ನು ಪಡುಬಿದ್ರಿ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಪೊಲೀಸರು ಅಂಗಡಿಯನ್ನು ಪರಿಶೀಲಿಸಿದಾಗ ಮಾರಾಟ ಮಾಡಲು ಇಟ್ಟಿದ್ದ ಒಟ್ಟು ಸುಮಾರು 625.83 ಗ್ರಾಂ ಗಾಂಜಾ ಗೋಲಿಗಳು ಪತ್ತೆಯಾಗಿವೆ. ಮಾದಕವಸ್ತು ಹಾಗೂ ಅದನ್ನು ಮಾರಾಟ ಮಾಡಿ ಸಂಗ್ರಹಿಸಿದ 600 ರೂ. ನಗದನ್ನು ಜಪ್ತಿ ಮಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.