ಕನ್ನಡ ಬಳಸಿ ಉಳಿಸುವ ಕಾರ್ಯವಾಗಲಿ

ಸಾಹಿತ್ಯ ಪ್ರೇರಣೆ, ಸಾಹಿತ್ಯ ಸಂಚಾರ 67 ಕಾರ್ಯಕ್ರಮವನ್ನು ಪ್ರಾಂಶುಪಾಲೆ ಡಾ.ವಿದ್ಯಾರಾಜ್ ಸಾಲಿಯಾನ್ ಉದ್ಘಾಟಿಸಿದರು. ಪ್ರಮುಖರಾದ ನೀಲಾವರ ಸುರೇಂದ್ರ ಅಡಿಗ, ನರಸಿಂಹ ತುಂಗ, ನಾಗರತ್ನ ಜಿ., ಪುನೀತ್ ಶೆಟ್ಟಿ ಇದ್ದರು.
ಸಾಹಿತ್ಯ ಪ್ರೇರಣೆ, ಸಾಹಿತ್ಯ ಸಂಚಾರ 67 ಕಾರ್ಯಕ್ರಮವನ್ನು ಪ್ರಾಂಶುಪಾಲೆ ಡಾ.ವಿದ್ಯಾರಾಜ್ ಸಾಲಿಯಾನ್ ಉದ್ಘಾಟಿಸಿದರು. ಪ್ರಮುಖರಾದ ನೀಲಾವರ ಸುರೇಂದ್ರ ಅಡಿಗ, ನರಸಿಂಹ ತುಂಗ, ನಾಗರತ್ನ ಜಿ., ಪುನೀತ್ ಶೆಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತ್ಯ ಪ್ರೇರಣೆ, ಸಾಹಿತ್ಯ ಸಂಚಾರ 67
  • ಕಥೆ, ಕವನ ರಚಿಸುವ ಸುಲಭ ಕ್ರಮ ವಿವರಣೆ
ಕೋಟ: ಕನ್ನಡವನ್ನು ಅನ್ನದ ಭಾಷೆಯಾಗಿ ರೂಪಿಸುವಲ್ಲಿ ಸೋತಿರುವ ನಾವು ಅನ್ಯ ಭಾಷೆಯನ್ನು ಬಹಳ ವೇಗವಾಗಿ ಒಪ್ಪಿಕೊಳ್ಳುವ ಸ್ಥಿತಿ ಬಂದಿದೆ. ಕನ್ನಡವನ್ನು ಬಳಸಿ ಉಳಿಸುವ ಕಾರ್ಯವಾಗಬೇಕು ಎಂದು ಕೋಟದ ಆಶ್ರಿತ್ ಕಾಲೇಜ್ ಆಫ್ ನರ್ಸಿಂಗ್ ಸಂಸ್ಥೆ ಪ್ರಾಂಶುಪಾಲೆ ಡಾ.ವಿದ್ಯಾ ರಾಜ್ ಸಾಲಿಯಾನ್ ಹೇಳಿದರು.
ಕೋಟದ ಆಶ್ರಿತ್ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಪ್ರೇರಣೆ, ಸಾಹಿತ್ಯ ಸಂಚಾರ 67 ಬುಧವಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಥೆ, ಕವನ ರಚಿಸುವ ಸುಲಭ ಕ್ರಮವನ್ನು ವಿವರಿಸಿದರು. ಗುಂಡ್ಮಿ ರಾಮಚಂದ್ರ ಐತಾಳ್ ಕಥೆ ಕವನಗಳನ್ನು ಹಾಡಿ ಭಾವಾಭಿನಯದ ಮೂಲಕ ಸಾಹಿತ್ಯದ ಮೆರುಗನ್ನು ವಿವರಿಸಿದರು. ಚಿತ್ರ ನಟ ಪುನೀತ್ ಶೆಟ್ಟಿ ಧಾರವಾಹಿ ಮತ್ತು ಚಲನಚಿತ್ರಗಳಲ್ಲಿ ಸಾಹಿತ್ಯದ ಅವಶ್ಯಕತೆ ತಿಳಿಸಿದರು. ನರಸಿಂಹ ತುಂಗ ಮತ್ತು ನಾಗರತ್ನ ಜಿ. ಯಕ್ಷಗಾನದಲ್ಲಿ ಬರುವ ದ್ವಂಧ್ವಾರ್ಥ ಪದಗಳ ಅರ್ಥಗಳನ್ನು ವಿವರಿಸಿ ಪ್ರಸಂಗದ ಪಾತ್ರಗಳನ್ನು ಅಭಿನಯಿಸಿ ತೋರಿಸಿದರು. ಅಚ್ಚುತ ಪೂಜಾರಿ ಕನ್ನಡ ಗೀತೆ ಹಾಡಿದರು.
ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಮಾತನಾಡಿದರು. ಮಣಿಪಾಲ್ ನರಸಿಂಹಮೂರ್ತಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಮೆಲ್ವಿನ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net