ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡವರ ಏಳಿಗೆ

ಮುದ್ರಾಡಿ ಶ್ರೀ ಮಂಜುನಾಥೇಶ್ವರ ನೂತನ ಸ್ವಸಹಾಯ ಸಂ ಉದ್ಘಾಟನೆ ಸಮಾರಂಭದಲ್ಲಿ ಯೋಜನೆ ವಲಯಾಧ್ಯಕ್ಷ ಯೋಗೇಶ್, ಪ್ರಮುಖರಾದ ಲೀಲಾವತಿ, ಮುದ್ದಣ್ಣ ಪೂಜಾರಿ, ಸಂತೋಷ್ ಪೂಜಾರಿ, ಸುಕುವಾರ ಪೂಜಾರಿ ಇದ್ದರು.
ಮುದ್ರಾಡಿ ಶ್ರೀ ಮಂಜುನಾಥೇಶ್ವರ ನೂತನ ಸ್ವಸಹಾಯ ಸಂ ಉದ್ಘಾಟನೆ ಸಮಾರಂಭದಲ್ಲಿ ಯೋಜನೆ ವಲಯಾಧ್ಯಕ್ಷ ಯೋಗೇಶ್, ಪ್ರಮುಖರಾದ ಲೀಲಾವತಿ, ಮುದ್ದಣ್ಣ ಪೂಜಾರಿ, ಸಂತೋಷ್ ಪೂಜಾರಿ, ಸುಕುವಾರ ಪೂಜಾರಿ ಇದ್ದರು.
Published on
ಹೆಬ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯಿಂದ ಜನತೆಗೆ ಸಾಕಷ್ಟು ಪ್ರಯೋಜನಗಳಾಗಿವೆ, ಊರಿನ ಅಭಿವೃದ್ಧಿಯಾಗಿದೆ. ಧರ್ವಾಧಿಕಾರಿಗಳು ಸಾಕಾರಗೊಳಿಸಿದ ನೂರಾರು ಜನೋಪಯೋಗಿ ಯೋಜನೆಗಳಿಂದ ಜನರ ಬದುಕು ಹಸನಾಗಿದೆ. ಬಡವರ ಬದುಕು ಕಲ್ಯಾಣವಾಗಿದೆ ಎಂದು ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ ಹೇಳಿದರು.
ಮುದ್ರಾಡಿ ಬಲ್ಲಾಡಿ ವಲಯದಲ್ಲಿ ಸೋಮವಾರ ಉದ್ಘಾಟನೆಗೊಂಡ ಶ್ರೀ ಮಂಜುನಾಥೇಶ್ವರ ನೂತನ ಸ್ವಸಹಾಯ ಸಂಘಕ್ಕೆ ಸಂದ ದಾಖಲೆಗಳು ಮತ್ತು ಕಾರ್ಯವೈಖರಿಗಳ ಮಾಹಿತಿ ನೀಡಿ ಮಾತನಾಡಿದರು.
ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ ಮಾತನಾಡಿದರು. ಸುಕುವಾರ ಪೂಜಾರಿ ಮುದ್ರಾಡಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಯೋಜನೆ ವಲಯಾಧ್ಯಕ್ಷ ಯೋಗೇಶ್, ಪ್ರಮುಖರಾದ ಮುದ್ದಣ್ಣ ಪೂಜಾರಿ, ಸಂತೋಷ್ ಪೂಜಾರಿ, ಸುಕುವಾರ ಪೂಜಾರಿ, ಸುಕುವಾರ್ ಮುನಿಯಾಲು, ಬಾಲಚಂದ್ರ ಮುದ್ರಾಡಿ, ಜಗದೀಶ್ ಆಚಾರ್ಯ, ಗೋಪಾಲ ಆಚಾರ್ಯ, ಭೋಜ ಪೂಜಾರಿ, ಉಮೇಶ್ ಬಿಕೆ, ಮಮತಾ, ಒಕ್ಕೂಟದವರು, ಸಂದವರು ಉಪಸ್ಥಿತರಿದ್ದರು. ಉಮೇಶ್ ಬಿ.ಕೆ.ಸ್ವಾಗತಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net