

ದಿ. ಪ್ರಭಾಕರ ಪೈ ಅವರೊಂದಿಗೆ ಸೇರಿ ಇಂದ್ರಾಳಿಯಲ್ಲಿ ಎಲ್ಕೆಜಿ ಶಾಲೆ ಆರಂಭಿಸಿದ್ದೆ. ಅದಿಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಅದನ್ನು ನೋಡುವಾಗ ಶಾಲೆ ಆರಂಭಿಸಿರುವುದಕ್ಕೆ ಸಾರ್ಥಕ ಭಾವ ಮೂಡುತ್ತಿದೆ. ಶಾಲೆಯ ಅಭಿವೃದ್ಧಿಗೆ, ಬೆಳವಣಿಗೆಗೆ ಸಹಕರಿಸಿದ ಎಲ್ಲ ಶಿಕ್ಷಕರಿಗೆ, ಆಡಳಿತ ಮಂಡಳಿಗೆ, ವಿಶೇಷವಾಗಿ ಎಲ್ಲ ಪಾಲಕರಿಗೆ ಕೃತಜ್ಞನಾಗಿದ್ದೇನೆ.