16 ವರ್ಷಗಳ ಹಿಂದೆ ಆರಂಭಗೊಂಡ ಕಲಾಕೇಂದ್ರ ಕಾಮಗಾರಿ ಪೂರ್ಣಗೊಳ್ಳದೆ ಪೊದೆಗಳಿಂದ ಆವರಿಸಿದ್ದು ಕುಡುಕರು, ಪುಂಡರ ಆಶ್ರಯತಾಣವಾಗಿದೆ. ಮದ್ಯದ ಬಾಟಲಿಗಳು, ಗಾಜಿನ ಚೂರು, ಒಡೆದ ಹೆಂಚು, ಕಿಟಕಿಗಳನ್ನು ಕಾಣಬಹುದಾಗಿದೆ. ಮಳೆಗಾಲದಲ್ಲಿ ನೀರು ಶೇಖರಣೆಯಾಗಿ ನೆಲ ಪಾಚಿಕಟ್ಟಿದೆ. ಛಾವಣಿಗೆ ಹೊದಿಸಲಾದ ಕಬ್ಬಿಣದ ಸರಳುಗಳ ತುಕ್ಕು ಹಿಡಿದು ಇಂದೋ ನಾಳೆಯೋ ಧರಾಶಾಯಿಯಾಗುವ ಸ್ಥಿತಿಯಲ್ಲಿವೆ.