

* ಉಡುಪಿ ಜಿಪಂ ಸಿಇಒ ಪ್ರತೀಕ್ ಬಾಯಲ್ ಕರೆ
ಒಬ್ಬ ಪುರುಷ ಶಿಕ್ಷಣ ಪಡೆದರೆ ಅದು ವೈಯಕ್ತಿಕ ಬೆಳವಣಿಗೆಗೆ ಸೀಮಿತವಾಗಬಹುದು. ಆದರೆ, ಓರ್ವ ಮಹಿಳೆ ಶಿಕ್ಷಣ ಮತ್ತು ಕೌಶಲ ಪಡೆದರೆ ಇಡೀ ಕುಟುಂಬವೇ ಸಬಲಗೊಳ್ಳುತ್ತದೆ. ವಯಸ್ಸು ಹಾಗೂ ಆಸಕ್ತಿಯ ಆಧಾರದಲ್ಲಿ ವಿವಿಧ ಗುಂಪು ರಚಿಸಿ ಸಣ್ಣ ಪ್ರಮಾಣದ ಉದ್ಯಮ ಪ್ರಾರಂಭಿಸಲು ಉತ್ತೇಜನ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ವತಿಯಿಂದ ಸಹಕಾರ ಮತ್ತು ನೆರವು ಒದಗಿಸಲಾಗುತ್ತಿದೆ.
— ಪ್ರತೀಕ್ ಬಾಯಲ್. ಉಡುಪಿ ಜಿಪಂ ಸಿಇಒ.