

ಉಡುಪಿ: ಬ್ಯಾಂಕ್ನ ನಿವೃತ್ತ ಉದ್ಯೋಗಿಯಾಗಿದ್ದ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಬೇಳೂರು ಗುರುದಾಸ ಶೆಣೈ (68) ರಸ್ತೆ ಅಪಘಾತದಲ್ಲಿ ಸೋಮವಾರ (ಅ.25) ಬೆಳಗ್ಗೆ ಮೃತಪಟ್ಟಿದ್ದಾರೆ.
ಸೈಕಲ್ ಮೇಲೆ ಬರುತ್ತಿದ್ದ ಅವರು ಕೋಟ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಸಂಜೆ 4 ಗಂಟೆಗೆ ಕೋಟ ಹಾಲಿನ ಡೈರಿ ಹಿಂಭಾಗದಲ್ಲಿರುವ ವೆಂಕಟೇಶ ನಿಲಯದಲ್ಲಿ ಅಂತ್ಯಕ್ರಿಯೆಯ ವಿಧಿ&ವಿಧಾನ ನಡೆಸಲಾಯಿತು.
ಅಪಘಾತದಲ್ಲಿ ಕಾರು ಚಾಲಕ ಕೋಟೇಶ್ವರದ ಬೀಜಾಡಿ ನಿವಾಸಿ ಪ್ರದೀಪ ಕಾಂಚನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಕೋಟದ ಜೀವನ ಮಿತ್ರ, ನಾಗರಾಜ ಪುತ್ರನ್ ಅವರು ಆಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಲು ನೆರವಾದರು.
36 ವರ್ಷಗಳ ಕಾಲ ಕಾರ್ಪೊರೇಷನ್ ಬ್ಯಾಂಕ್ನ ಈಗಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹಲವಾರು ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅಪಾರ ದೈವಭಕ್ತರೂ ಆಗಿದ್ದ ಅವರು ಆರ್ಎಸ್ಎಸ್ನ ಹಿರಿಯ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.