17ರಂದು ಆರ್​ಎಸ್​ಬಿ, -ಬಿಜಿಎಸ್​ಬಿ ಋಣಾನುಬಂಧ ಸಮಾವೇಶ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ವಧು- ವರ ಪರಿಚಯ ಸಮಾವೇಶ
  • ಬಂಟಕಲ್ಲು ರೋಟರಿ ಸಭಾಭವನದಲ್ಲಿ ಆಯೋಜನೆ
  • ನಿಬಂಧನೆಗಳು ಏನೇನು...?
ವಿಜಯವಾಣಿ ಸುದ್ದಿಜಾಲ ಶಿರ್ವ
ಆರ್​ಎಸ್​ಬಿ ಮತ್ತು ಬಿಜಿಎಸ್​ಬಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರ ಬೆಂಗಳೂರು ನೇತೃತ್ವ ಮತ್ತು ಆಯೋಜನೆಯಲ್ಲಿ ಆರ್​ಎಸ್​ಬಿ, -ಬಿಜಿಎಸ್​ಬಿ ವಧು- ವರ ಪರಿಚಯ ಸಮಾವೇಶ "ಋಣಾನುಬಂಧ' ಕಾರ್ಯಕ್ರಮ ಮೇ 17ರಂದು ಬಂಟಕಲ್ಲು ರೋಟರಿ ಸಭಾಭವನದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಜರುಗಲಿದೆ.

ನಿಬಂಧನೆಗಳು ಏನೇನು...?

ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು- ವರರು ತಮ್ಮ ಬಯೋಡೇಟಾ ಮತ್ತು ಪೂರ್ಣ ಸೈಜ್​ನ ಫೋಟೋವನ್ನು ಕಡ್ಡಾಯವಾಗಿ ತರುವುದು. ನೋಂದಣಿ, ಊಟ, ಉಪಾಹಾರ ಎಲ್ಲವೂ ಉಚಿತವಾಗಿರುತ್ತದೆ. ವಧು- ವರರ ಜತೆಗೆ ಇಬ್ಬರಿಗೆ ಬರಲು ಅವಕಾಶವಿದೆ. ಮಾಹಿತಿಗಾಗಿ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು.

ವಿಶೇಷ ಉಪನ್ಯಾಸ

ಜೀವನ ತರಬೇತುದಾರ ಸುಬ್ರಹ್ಮಣ್ಯ ಕುಲೇದು ಬೆಂಗಳೂರು ಅವರಿಂದ ಬೆಳಗ್ಗೆ 9ರಿಂದ 15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ "ಜೀವನ ದೃಷ್ಟಿಕೋವನ್ನು ಹೇಗೆ ಹೊಂದಿಸುವುದು?' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಪ್ತಪದಿ ವಿವಾಹ ಮಾಹಿತಿ ಕೇಂದ್ರ ಬೆಂಗಳೂರು ಪ್ರಧಾನ ಸಂಚಾಲಕ ಎಂ.ಡಿ.ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net