ಸೇತುವೆಗಳ ನಿರ್ಮಾಣಕ್ಕೆ 14.95 ಕೋಟಿ ರೂ. ಮಂಜೂರು

ಉಡುಪಿ ಶಾಶಕ ಯಶ್​ಪಾಲ್​ ಸುವರ್ಣ.
ಉಡುಪಿ ಶಾಶಕ ಯಶ್​ಪಾಲ್​ ಸುವರ್ಣ.
Published on

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾಹಿತಿ

ಉಡುಪಿ: ತಾಲೂಕಿನ ಕಲ್ಮಾಡಿ ಬಂಕೇರಕಟ್ಟದಲ್ಲಿ ನೂತನ ಸೇತುವೆ ಹಾಗೂ ಪೆರಂಪಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ಅಗಲೀಕರಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ 14.95 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದ್ದಾರೆ.
ಅಂಬಾಗಿಲು-ಮಣಿಪಾಲ ರಸ್ತೆ ಮಾರ್ಗವು ವಾಹನ ದಟ್ಟಣೆಯಿಂದ ಕೂಡಿದ್ದು, ರಸ್ತೆಯನ್ನು ಚತುಷ್ಪಥ ಮಾರ್ಗ ಮಾಡಲಾಗಿತ್ತು. ನಂತರ ಪೆರಂಪಳ್ಳಿ ರೈಲ್ವೆ ಮೇಲ್ಸೇತುವೆಯಲ್ಲಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳ ಸುಗಮ ಸಂಚಾರ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಅಗಲೀಕರಣ ಅತಿ ಅವಶ್ಯಕವಾಗಿತ್ತು ಎಂದು ತಿಳಿಸಿದ್ದಾರೆ.
ಕಲ್ಮಾಡಿ ಬಂಕೇರಕಟ್ಟ ಸೇತುವೆಯೂ ಸಹ ಹಳೆಯದಾಗಿದ್ದು ಪ್ರತಿವರ್ಷ ಮಳೆಗಾಲದಲ್ಲಿ ಕೃತಕ ನೆರೆ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗುತ್ತಿತ್ತು. ಈ ವಿಚಾರವಾಗಿ ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದ ಸತೀಶ್​ ಜಾರಕಿಹೊಳಿ ಅವರು ಉಡುಪಿ ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"

ಲೋಕೋಪಯೋಗಿ ಇಲಾಖೆ ಮೂಲಕ ಸಲ್ಲಿಸಿದ್ದ ಪ್ರಸ್ತಾವನೆಗೆ ಪೆರಂಪಳ್ಳಿ ರೈಲ್ವೆ ಮೇಲ್ಸೇತುವೆ ಅಗಲೀಕರಣಕ್ಕೆ 9.95 ಕೋಟಿ ರೂ. ಹಾಗೂ ಕಲ್ಮಾಡಿ ಬಂಕೇರಕಟ್ಟದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ಮಂಜೂರಾಗಿದೆ. ವಿಶೇಷ ಸಹಕಾರ ನೀಡಿದ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ.

— ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net