ಊರ್ಜಾ ಡೆವಲಪ್‌ಮೆಂಟ್ ಸೊಲ್ಯೂಷನ್ ಪ್ರತಿನಿಧಿ ಚಂದನ, ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಧಾ, ಸದಸ್ಯರಾದ ಮುರಳೀಧರ ಕೋಟ್ಯಾನ್, ವಾಸುದೇವ ನಾಯಕ್, ಇತರ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. ಮಾಜಿ ಜನಪ್ರತಿನಿಧಿಗಳು, ಸ್ವಸಹಾಯ ಗುಂಪುಗಳ ಸದಸ್ಯರು, ರೈತರು, ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು. ಮುಂದಿನ ಹಂತದಲ್ಲಿ ಕಾಮಗಾರಿ, ಸ್ಥಳ ಆಯ್ಕೆ, ವಿದ್ಯುತ್ ಉತ್ಪಾದನೆ, ಆದಾಯ ಬಳಕೆಯ ಸಮಗ್ರ ರೂಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಯಿತು.