

ಕಾಸರಗೋಡು: ರೈಲು ಪ್ರಯಾಣ ವೇಳೆ ಹಳಿಗೆ ಬಿದ್ದಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಆರ್‌ಪಿಎಫ್ ಅಧಿಕಾರಿಗಳು ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಬುಧವಾರ ರಾತ್ರಿ ಮಂಗಳೂರಿನಿಂದ ಕುಟ್ಟಿಪುರಂಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ 80,000 ರೂ. ಮೌಲ್ಯದ ಐಫೋನ್ ಹಳಿಗೆ ಬಿದ್ದು ಕಳೆದುಹೋಗಿತ್ತು.
ಈ ಬಗ್ಗೆ ಮಾಹಿತಿ ಪಡೆದ ಕಾಸರಗೋಡು ರೈಲ್ವೆ ರಕ್ಷಣಾ ಪಡೆಯ ಎಎಸ್‌ಐ ಕೆ.ಜಿ.ವಿನೋದ್, ಕಾನ್‌ಸ್ಟೆಬಲ್ ಶಶಿಧರನ್ ರಾತ್ರಿ ವೇಳೆ ಟ್ರಾೃಕ್‌ನಲ್ಲಿ ಕಿಲೋಮೀಟರ್‌ವರೆಗೆ ನಡೆದು ಮೊಬೈಲ್ ಫೋನ್ ಪತ್ತೆಹಚ್ಚಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಗುರುವಾರ ತಿರುವನಂತಪುರದಿಂದ ಕಾಸರಗೋಡಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ 68,000 ರೂ. ಮೌಲ್ಯದ ಐಫೋನ್ ಹಳಿಗೆ ಬಿದ್ದಿದ್ದು, ಆ ಫೋನ್‌ನ್ನು ಕೂಡಾ ಆರ್‌ಪಿಎಫ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.