ಬೈಕಾಡಿಯಲ್ಲಿ ರೌಡಿ ಶೀಟರ್ ಹತ್ಯೆ

ವೈಯಕ್ತಿಕ ವಿಷಯಕ್ಕೆ ಹೊಡೆದಾಟ
Published on: 

ಬ್ರಹ್ಮಾವರ: ಹಣಕಾಸು ಮತ್ತು ವೈಯಕ್ತಿಕ ವಿಷಯದ ಜಗಳ ವಿಕೋಪಕ್ಕೆ ತಿರುಗಿ ರೌಡಿಶೀಟರ್ ಸುಜೀತ್ ಪಿಂಟೋ ಎಂಬಾತನ್ನು ಬೈಕಾಡಿಯಲ್ಲಿ ಮಂಗಳವಾರ ರಾತ್ರಿ ಇ್ಟೀಲ್‌ಪೈಪ್‌ನಿಂದ ತಲೆಗೆ ಹೊಡೆದು ಕೊಲೆಗೈಯ್ಯಲಾಗಿದೆ.

ಮಂಗಳವಾರ ರಾತ್ರಿ 7 ಗಂಟೆಯಿಂದ 8.30ರ ನಡುವೆ ಪಡು ಬೈಕಾಡಿ ಸಿವಾಸಿಗಳಾದ ಪ್ರದೀಪ್ ಪೂಜಾರಿ(45) ಮತ್ತು ಪ್ರಮೋದ್ ಪೂಜಾರಿ(39) ಎಂಬುವರು ಜೀವನ್ ಪೂಜಾರಿ ಮತ್ತು ಕಲ್ಯಾಣಪುರ ಸಂತೆಕಟ್ಟೆಯ ಸುಜೀತ್ ಪಿಂಟೋ ಅವರನ್ನು ಬೈಕಾಡಿಗೆ ಕರೆಸಿಕೊಂಡು ವೈಯಕ್ತಿಕ ವಿಷಯಕ್ಕೆ ಹೊಡೆದಾಟ ನಡೆದಿದೆ.

ಪ್ರದೀಪ್ ಪೂಜಾರಿ ಸುಜಿತ್ ಪಿಂಟೋ ಹಿಡಿದಿದ್ದು, ಪ್ರಮೋದ್ ಪೂಜಾರಿ ಸ್ಟೀಲ್ ಪೈಪ್‌ನಿಂದ ತಲೆಗೆ ಹೊಡೆದಿದ್ದಾನೆ. ಜಗಳ ತಪ್ಪಿಸಲು ಬಂದ ಜೀವನ್ ಪೂಜಾರಿ ಮೇಲೂ ಹಲ್ಲೆ ನಡೆದಿದೆ. ತೀವ್ರ ರಕ್ತಸ್ರಾವದಿಂದ ಪಿಂಟೋ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತ ಸುಜಿತ್ ಪಿಂಟೋ ಮೇಲೆ ಮಲ್ಪೆ ಠಾಣೆಯಲ್ಲಿ ರೌಡಿಶೀಟರ್ ಇದ್ದು, ಉಡುಪಿ ನಗರ, ಹಿರಿಯಡ್ಕ ಮತ್ತು ಮಣಿಪಾಲ ಠಾಣೆಯಲ್ಲಿ ಅನೇಕ ಪ್ರಕರಣಗಳಿವೆ ಎಂಬುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರತ್ಯಕ್ಷ ಸಾಕ್ಷಿ ಜೀವನ್ ಪೂಜಾರಿ ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net