ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ರೌಡಿಶೀಟರ್​ ಬಂಧನ

ಅಜ್ಜರಕಾಡು ಭುಜಂಗ ಪಾರ್ಕ್​ ಸಮೀಪ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
sell MDMA
ವಿಜಯ್​ ಪೂಜಾರಿ
Published on: 

ಉಡುಪಿ: ಅಜ್ಜರಕಾಡು ಭುಜಂಗ ಪಾರ್ಕ್​ ಸಮೀಪ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉದ್ಯಾವರದ ಅಂಕುದ್ರು ನಿವಾಸಿ ವಿಜಯ್​ ಅಲಿಯಾಸ್​ ವಿಜಯ್​ ಪೂಜಾರಿ (36) ಬಂಧಿತ ಆರೋಪಿ. ಆತನಿಂದ 85,000 ರೂ. ಮೌಲ್ಯದ ಮಾದಕ ವಸ್ತು, ಸ್ಕೂಟರ್​ ಹಾಗೂ ಮೊಬೈಲ್​ ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅ. 17ರಂದು ಸಂಜೆ ಅಜ್ಜರಕಾಡು ಭುಜಂಗ ಪಾರ್ಕ್​ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸ್ಕೂಟರ್​ನಲ್ಲಿ ನಿಂತು ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ಕೂಟರ್​ನ ಡಿಕ್ಕಿಯನ್ನು ಪರಿಶೀಲಿಸಿದಾಗ 35,000 ರೂ. ಮೌಲ್ಯದ 17.66 ಗ್ರಾಂ ತೂಕದ ಎಂಡಿಎಂಎ ಮಾತ್ರೆ, 2 ರೂ. ಮೌಲ್ಯದ ಡಿಜಿಟಲ್​ ತೂಕದ ಯಂತ್ರ, 8,000 ರೂ. ಮೌಲ್ಯದ ಮೊಬೈಲ್​, ಕೃತ್ಯಕ್ಕೆ ಬಳಸಿದ್ದ 40,000 ರೂ. ಮೌಲ್ಯದ ಸ್ಕೂಟರ್​ ವಶಪಡಿಸಿಕೊಳ್ಳಲಾಗಿದೆ.

ಜೈಲಿನಿಂದ ಬಂದ ಕೆಲವೇ ದಿನಗಳಲ್ಲಿ ಕೃತ್ಯ!

ಬಂಧಿತ ಆರೋಪಿ ವಿಜಯ್​ ಹಳೆಯ ಅಪರಾಧಿಯಾಗಿದ್ದು (ರೌಡಿಶೀಟರ್​), ಆತನ ವಿರುದ್ಧ ಉಡುಪಿ ನಗರ ಹಾಗೂ ಕಾಪು ಪೊಲೀಸ್​ ಠಾಣೆಗಳಲ್ಲಿ ಈಗಾಗಲೇ ಹಲವು ಎನ್​ಡಿಪಿಎಸ್​ ಹಾಗೂ ಎಸ್​ಸಿ&ಎಸ್​ಟಿ ಅಟ್ರಾಸಿಟಿ ಪ್ರಕರಣಗಳು ದಾಖಲಾಗಿವೆ. ಸೆ. 24ರಂದು ಹಿರಿಯಡ್ಕ ಜೈಲಿನಿಂದ ಬಿಡುಗಡೆಯಾಗಿದ್ದ ಈತ, ಹೊರಬಂದ ಕೆಲವೇ ದಿನಗಳಲ್ಲಿ ಮತ್ತೆ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಈ ಕುರಿತು ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net