ಕಡಬ ಪೊಲೀಸ್ ಠಾಣೆ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಖಾಸಿಂ, ಹಳೇ ವಿದ್ಯಾರ್ಥಿ ಸಂದ ಗೌರವಾಧ್ಯಕ್ಷ ಚಂದ್ರಶೇಖರ ರೈ, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರೋಹಿತ್ ಬಿ.ಬಿ., ಮುಖ್ಯಶಿಕ್ಷಕ ರಾಮಕೃಷ್ಣ ಮಲ್ಲಾರ, ರೋಟರಿ ಪೂರ್ವಾಧ್ಯಕ್ಷರಾದ ಉಮೇಶ ಕೆ.ಎನ್., ವಿಶ್ವನಾಥ್ ನಡುತೋಟ, ಗೋಪಾಲ ಎಣ್ಣೆಮಜಲ್, ಮಾಯಿಲಪ್ಪ ಸಂಕೇಸ, ಪೂರ್ವ ಕಾರ್ಯದರ್ಶಿ ಡಾ.ರವಿ ಕಕ್ಕೆಪದವು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರುತಿ ಬಿ.ಎಚ್. ಸ್ವಾಗತಿಸಿದರು.