ರೋಟರಿ ಕ್ಲಬ್‌ನಿಂದ ಚಿಣ್ಣರ ಪ್ರವಾಸಿ ದರ್ಶನ

ಮೂಡುಕೇರಿ-ಅಚ್ಲಾಡಿ ಶಾಲೆ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ವತಿಯಿಂದ ಆಯೋಜಿಸಿದ್ದ ಚಿಣ್ಣರ ಪ್ರವಾಸಿ ದರ್ಶನಕ್ಕೆ ರೋಟರಿ ಅಧ್ಯಕ್ಷ ಯೋಗೀಶ್ ಕುಮಾರ್ ಚಾಲನೆ ನೀಡಿದರು.
ಮೂಡುಕೇರಿ-ಅಚ್ಲಾಡಿ ಶಾಲೆ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ವತಿಯಿಂದ ಆಯೋಜಿಸಿದ್ದ ಚಿಣ್ಣರ ಪ್ರವಾಸಿ ದರ್ಶನಕ್ಕೆ ರೋಟರಿ ಅಧ್ಯಕ್ಷ ಯೋಗೀಶ್ ಕುಮಾರ್ ಚಾಲನೆ ನೀಡಿದರು.
Published on

ರೋಟರಿಕ್ಲಬ್‌ನಿಂದ ಚಿಣ್ಣರ ಪ್ರವಾಸಿದರ್ಶನ

- ಪಿಲಿಕುಳಕ್ಕೆಭೇಟಿ ನೀಡಿದ ಮೂಡುಕೇರಿ-ಅಚ್ಲಾಡಿಶಾಲೆ ಮಕ್ಕಳು

ಕೋಟ:ಗ್ರಾಮೀಣಭಾಗದ ಶಾಲೆಗಳ ವಿದ್ಯಾರ್ಥಿಗಳುಆರ್ಥಿಕ ಸಮಸ್ಯೆ ಇನ್ನಿತರ ಕಾರಣಕ್ಕೆಶೇ.ನೂರರಷ್ಟುಮಂದಿ ಶೈಕ್ಷಣಿಕ ಪ್ರವಾಸದಲ್ಲಿಭಾಗವಹಿಸುವುದಿಲ್ಲ.ಹೀಗಾಗಿಇಂತಹ ಗ್ರಾಮೀಣ ಪ್ರದೇಶದ ಶಾಲೆಗಳನ್ನುಗುರುತಿಸಿ ಸಂಪೂರ್ಣ ರೋಟರಿಪ್ರಯೋಜಕತ್ವದಲ್ಲಿ ಶೈಕ್ಷಣಿಕಪ್ರವಾಸ ಚಿಣ್ಣರಪ್ರವಾಸಿ ದರ್ಶನವನ್ನುರೋಟರಿ ಕ್ಲಬ್ ಕೋಟ-ಸಾಲಿಗ್ರಾಮಆಯೋಜಿಸಿತು.ಮೊದಲಪ್ರವಾಸಕ್ಕೆ ಮೂಡುಕೇರಿ-ಅಚ್ಲಾಡಿಶಾಲೆಯನ್ನು ಆಯ್ಕೆ ಮಾಡಿ,ಮಂಗಳೂರಿನಪಿಲಿಕುಳಕ್ಕೆ ಮಕ್ಕಳನ್ನುಕರೆದುಕೊಂಡು ಹೋಗಲಾಗಿತ್ತು.

ರೋಟರಿಅಧ್ಯಕ್ಷ ಯೋಗೀಶ್ ಕುಮಾರ್ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ,ಶೈಕ್ಷಣಿಕಪ್ರವಾಸ ಪ್ರತಿಯೊಬ್ಬರ ಜೀವನದಲ್ಲಿಸದಾ ನೆನಪಿಡುವ ಒಂದು ಸುಂದರಅನುಭವ.ಆದರೆಗ್ರಾಮಾಂತರ ಭಾಗದ ಹಲವು ವಿದ್ಯಾರ್ಥಿಗಳುಅರ್ಥಿಕ ಕಾರಣಕ್ಕೆ ಈಗಲೂ ಪ್ರವಾಸದಿಂದಹಿಂದುಳಿಯುವ ಸಾಧ್ಯತೆ ಇದೆ.ಹೀಗಾಗಿಗ್ರಾಮಾಂತರ ಭಾಗದ ಇಂತಹ ಶಾಲೆಯನ್ನುಗುರುತಿಸಿ ರೋಟರಿಯ ಸಂಪೂರ್ಣಪ್ರಾಯೋಜಕತ್ವದಲ್ಲಿ ಪ್ರವಾಸಕೈಗೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆಎಂದು ತಿಳಿಸಿದರು.

ವಡ್ಡರ್ಸೆಗ್ರಾ.ಪಂ.ಸದಸ್ಯಚಂದ್ರಶೇಖರ್ ಶೆಟ್ಟಿ ಅಚ್ಲಾಡಿ,ಸಿದ್ಧಿವಿನಾಯಕದೇಗುಲ ವ್ಯವಸ್ಥಾಪನಾ ಸಮಿತಿಅಧ್ಯಕ್ಷ ಬಾಲಕೃಷ್ಣ ಶೆಟ್ಟಿರೋಟರಿ ಯೋಜನೆ ಬಗ್ಗೆ ಶ್ಲಾಘಿಸಿದರು.ರೋಟರಿಕಾರ್ಯದರ್ಶಿ ಶರಣಯ್ಯ ಹಿರೇಮಠ,ರೋಟರಿಮಾಜಿ ಕಾರ್ಯದರ್ಶಿ ಚಂದ್ರ ಪೂಜಾರಿ,ಸದಸ್ಯರಾದಕರುಣಾಕರ ಕುಂದರ್,ಅರುಣ್ಕುಂದರ್,ಮಾಧವಪೂಜಾರಿ ಹಾಗೂ ರೋಟರಿ ಸದಸ್ಯರು,ಪಾಲಕರು,ಶಾಲಾಶಿಕ್ಷಕರು ಇದ್ದರು.ಮುಖ್ಯಶಿಕ್ಷಕಿಸಂಧ್ಯಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net