

ಉಡುಪಿ: ಮಣಿಪಾಲದಲ್ಲಿ ಇತ್ತೀಚೆಗೆ ನಡೆದ ರೋಟರಿ ಜಿಲ್ಲೆ 3182ರ ವಲಯ-4ರ 'ರಂಗ್ ತರಂಗ್' ಸಾಂಸ್ಕೃತಿಕ ಸಮ್ಮಿಲನ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಐಸಿರಿ ಪರ್ಕಳ ತಂಡವು ಸಮಗ್ರ ರನ್ನರ್ ಅಪ್ ಪ್ರಶಸ್ತಿ ಗಳಿಸಿದೆ.
ಐಸಿರಿ ಕುಟುಂಬದ 22 ಸ್ಪರ್ಧಿಗಳು ಏಳು ಸ್ಪರ್ಧೆಗಳಲ್ಲೂ ಭಾಗವಹಿಸಿ ಸಾಧನೆ ಮಾಡಿದೆ. ಸಮೂಹ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಯುಗಳ ಗೀತೆ ಸ್ಪರ್ಧೆಯಲ್ಲಿ ರೊ. ಗುರುಪ್ರಸಾದ ಕಾಮತ ಮತ್ತು ಅನ್ನೆಟ್ ಯಶಾ ಕಾಮತ ನೇತೃತ್ವದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.
ಗಾಯನ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ರೊ. ವೆಂಕಟೇಶ ಭಟ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ರೊ. ಡಾ. ಸ್ವಾತಿ ಪೈ ತೃತೀಯ, ರೊ. ಕೃಷ್ಣಪ್ಪ ನಿರ್ದೇಶನದ ಕಿರುನಾಟಕ ತಂಡವು ತೃತೀಯ ಸ್ಥಾನ ಗಳಿಸಿ ಕ್ಲಬ್ನ ಕೀರ್ತಿ ಹೆಚ್ಚಿಸಿದೆ ಎಂದು ಕ್ಲಬ್ ಅಧ್ಯಕ್ಷ ರೊ. ಸಂದೀಪಕುಮಾರ ತಿಳಿಸಿದ್ದಾರೆ.