ಕೊಕ್ಕರ್ಣೆ: ಗ್ರಾಮ ಪಂಚಾಯಿತಿಗಳಲ್ಲಿ ಯುವ ಗ್ರಾಮಸಭೆಯ ಅನುಷ್ಠಾನ ಪ್ರಸ್ತುತ ಹಂತದಲ್ಲಿ ಅನಿವಾರ್ಯವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಯುವ ಜನತೆಯ ಅಹವಾಲುಗಳ ಬಗ್ಗೆ ತಿಳಿಯಲು ಹಾಗೂ ಕ್ರಿಯಾತ್ಮಕ ಆಡಳಿತಕ್ಕೆ ಅನುಕೂಲವಾಗಲಿದೆ ಎಂದು ಉಡುಪಿ ಜಿಲ್ಲಾ ಪಂಚಾಯಿತಿನ ಯೋಜನಾ ನಿರ್ದೇಶಕ ವಿಜಯ ಕುಮಾರ್ ಹೇಳಿದರು.
ಕಾಡೂರು ಗ್ರಾಪಂನಲ್ಲಿ ಸೋಮವಾರ ನಡೆದ ಯುವ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಕಾಡೂರು ಗ್ರಾಪಂ ಯುವ ಗ್ರಾಮಸಭೆ ಆಯೋಜಿಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಮಾಡಿದ್ದು, ಎಲ್ಲ ಪಂಚಾಯಿತಿಗಳಲ್ಲಿ ಇದರ ಮಾದರಿಯಲ್ಲಿ ಅನುಷ್ಠಾನದ ಅಗತ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಈ ಭಾಗದ ಯುವಜನತೆ ಆದ್ಯತೆಯನ್ನು ನೀಡುವುದರೊಂದಿಗೆ ಉದ್ಯಮಶೀಲತೆ ಹಾಗೂ ಕೃಷಿ ತೋಟಗಾರಿಕೆಗೂ ಹೆಚ್ಚಿನ ಒತ್ತು ನೀಡಿದರೆ ಗ್ರಾಮೀಣ ವಲಯದ ಸಮಗ್ರ ಪ್ರಗತಿಗೆ ಅನುಕೂಲವಾಗಲಿದೆ ಎಂದರು.
ಬ್ರಹ್ಮಾವರ ತಾಪಂ ಸಹಾಯಕ ನಿರ್ದೇಶಕ ಮಹೇಶ ಕೆ. ಮಾತನಾಡಿ ಸ್ವಚ್ಛತೆ ಅನುಷ್ಠಾನ ಹಾಗೂ ಯೋಜನೆಗಳನ್ನು ನಾಗರಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಯುವಜನತೆ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡರೆ ಸ್ಥಳೀಯ ಆಡಳಿತ ಯಶಸ್ಸು ಪಡೆಯಲಿದೆ. ಯುವಜನತೆಯ ಬೇಡಿಕೆಗಳಿಗೂ ಸ್ಥಳೀಯ ಆಡಳಿತ ಪೂರಕವಾಗಿ ಸ್ಪಂದಿಸಿದಾಗ ಹೊಸತನದ ಕಾರ್ಯಚಟುವಟಿಕೆಗಳತ್ತ ಪ್ರಯತ್ನಿಸಬಹುದಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಜಲಂಧರ್ ಶೆಟ್ಟಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನನಿ ಪ್ರಶಾಂತ್, ರವೀಂದ್ರ ತಂತ್ರಾಡಿ, ಕೌಸ್ತುಭ ನಡೂರು, ದಿನಕರ್ ಎ.ಕೆ.ಶೆಟ್ಟಿ ನಡೂರು ಮತ್ತಿತರರು ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಪ್ರಭಾವತಿ, ಸದಸ್ಯರಾದ ಪಾಂಡುರಂಗ ಶೆಟ್ಟಿ, ವಿಜಯ ಮರಕಾಲ, ಅಮಿತಾ, ಸತೀಶ್ ಕುಲಾಲ್, ಗಿರೀಶ್ ರಾವ್, ಶ್ರೀವಾಣಿ ಪ್ರೌಢಶಾಲೆ ಮುಖ್ಯಶಿಕ್ಷಕ ಅಶೋಕ್ ಶೆಟ್ಟಿ, ಆರೋಗ್ಯಾಧಿಕಾರಿ ಮಂಜುಳಾ, ದುರ್ಗಾ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಜ್ಯೋತಿ, ಸಂಘ ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಅಮಿತಾ ರಾಜೇಶ್ ಸ್ವಾಗತಿಸಿದರು. ಪಿಡಿಒ ವಸಂತ್ ಕುಮಾರ್ ನಿರೂಪಿಸಿ, ವಂದಿಸಿದರು.
ಸ್ಥಳೀಯ ಯುವ ಸಾಧಕರನ್ನು ಪರಿಚಯಿಸಿ ಅವರ ಸಾಧನೆಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿರುವುದು ಉತ್ತಮ ಪರಿಕಲ್ಪನೆಯಾಗಿದೆ. ಯಾವುದೇ ಕ್ಷೇತ್ರದಲ್ಲಿ ಆತ್ಮವಿಶ್ವಾಸ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಯಶಸ್ಸು ಸಾಧ.