ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆ ಐಕ್ಯಂ ಸ್ಪೋರ್ಟ್ಸ್ ಸೈನ್ಸ್ ಸಂಸ್ಥೆಯನ್ನು ಸ್ಥಾಪಿಸಿ, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಗೆ ವೈಜ್ಞಾನಿಕ ಹಂತದ ಫಿಸಿಯೋ ಮತ್ತು ರಿಕವರಿ ಥೆರಪಿ ಸೇವೆಗಳನ್ನು ನೀಡುತ್ತಿದ್ದಾರೆ. ಅವರ ವೃತ್ತಿಪರ ಅನುಭವ ಪರಿಗಣಿಸಿ ಇಂಡಿಯನ್ ಪ್ಯಾರಾ ಒಲಂಪಿಕ್ ತಂಡದ ಚೀಫ್ ಕೋಚ್ ಸತ್ಯನಾರಾಯಣ್ ಅವರು ಭಾರತ ತಂಡದ ಜೊತೆ ಸೇವೆ ಸಲ್ಲಿಸುವ ಈ ಮಹತ್ವದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.