ದೆಹಲಿ ಕೃಷ್ಣಮಂದಿರಕ್ಕೆ ರಾರ್ಬಟ್​ ವಾದ್ರಾ ಭೇಟಿ

 ಶ್ರೀಕೃಷ್ಣಮಂದಿರಕ್ಕೆ ರಾರ್ಬಟ್​ ವಾದ್ರಾ ಶುಕ್ರವಾರ ಭೇಟಿ ನೀಡಿದರು.
ಶ್ರೀಕೃಷ್ಣಮಂದಿರಕ್ಕೆ ರಾರ್ಬಟ್​ ವಾದ್ರಾ ಶುಕ್ರವಾರ ಭೇಟಿ ನೀಡಿದರು.
Published on
ಉಡುಪಿ: ನವದೆಹಲಿಯ ವಸಂತ್​ ಕುಂಜ್​ನಲ್ಲಿರುವ ಉಡುಪಿ ಪೇಜಾವರ ಮಠದ ಶಾಖೆ ಶ್ರೀಕೃಷ್ಣಮಂದಿರಕ್ಕೆ ಸಂಸದೆ ಹಾಗೂ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ವಾದ್ರಾ ಪತಿ ರಾರ್ಬಟ್​ ವಾದ್ರಾ ಶುಕ್ರವಾರ ಭೇಟಿ ನೀಡಿದರು.

ಮಠದ ಸನಿಹದಲ್ಲಿ ಏರ್ಪಡಿಸಿದ್ದ ಖಾಸಗಿ ಸಮಾರಂಭಕ್ಕೆ ಆಗಮಿಸಿದ್ದ ಅವರು, ಕೃಷ್ಣಮಂದಿರಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಬಳಿಕ ಗುರುಕುಲದ ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಮಾಲೊಚನೆ ನಡೆಸಿದರು. ಮಠದ ಪ್ರಧಾನ ವ್ಯವಸ್ಥಾಪಕ ಡಾ. ವಿಠೋಬಾಚಾರ್ಯ , ಅರ್ಚಕ ಸುಮನ್​ ಆಚಾರ್ಯ ಗೌರವಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net