ದರೋಡೆ ಆರೋಪಿ 22 ವರ್ಷ ಬಳಿಕ ಬಂಧನ

Arrest
Arrest
Published on

ಕಾಸರಗೋಡು: ವ್ಯಾಪಾರಿಯ ತಲೆಗೆ ಹೊಡೆದು ಹಣ ದರೋಡೆಗೈದ ಪ್ರಕರಣದ ಆರೋಪಿ ಕಣ್ಣೂರು ಆಲವಿಲ್ ನಿವಾಸಿ ಎಚ್.ಮುನೀರ್ ಯಾನೆ ಮುನ್ನ(54) ಎಂಬಾತನನ್ನು 22 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

ಹೊಸದುರ್ಗ ಕಾಫಿಯಾ ಟ್ರೇಡರ್ಸ್ ಹೆಸರಿನ ಕಾಡುತ್ಪನ್ನ ಮಾರಾಟದಂಗಡಿ ಮಾಲೀಕ ಸಿ.ಅಬ್ದುಲ್ಲ ಹಾಜಿ ಎಂಬುವರು 2004 ಜ.9ರಂದು ರಾತ್ರಿ ಅಂಗಡಿ ಮುಚ್ಚಿ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ದಾರಿ ಮಧ್ಯೆ ತಂಡವೊಂದು ಅವರ ತಲೆಗೆ ಹೊಡೆದು 80 ಸಾವಿರ ರೂ. ಇದ್ದ ಬ್ಯಾಗ್ ಎಗರಿಸಿತ್ತು. ಹೊಸದುರ್ಗ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.
ಆರೋಪಿಗಳಾದ ತಮಿಳುನಾಡು ನಿವಾಸಿ ಆರ್.ಶರವಣನ್, ಪಳಯಂಗಾಡಿಯ ಥೋಮಸ್ ಸೆಬಾಸ್ಟಿನ್, ಹೊಸದುರ್ಗದ ಅಶ್ರಫ್, ಅಂಬಲತ್ತರದ ಪಿ.ಎಂ.ಮುನೀರ್, ಕಣ್ಣೂರು ಅಲವಿಲ್ ನಿವಾಸಿ ಎಚ್.ಮುನೀರ್ ಅಲಿಯಾಸ್ ಮುನ್ನಾ ಎಂಬುವರನ್ನು ಬಂಧಿಸಲಾಗಿತ್ತು.
ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಎಚ್.ಮುನೀರ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. 22 ವರ್ಷಗಳ ನಂತರ ವಯನಾಡಿನಲ್ಲಿ ಬಂಧಿಸಲಾಗಿದ್ದು ಆತನಿಗೆ ನ್ಯಾಯಾಂಗ ವಿಧಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net