ಅನೀಲ್ ಕುಂಬಳೆ ರಸ್ತೆ ಸನಿಹದ ಕೃಷ್ಣಸುಧಾ ನಿವಾಸದ ರಾಜೇಶ್ ಶೆಣೈ ಎಂಬುವರ ಮನೆಗೆ 2012 ಡಿ.22ರಂದು ನುಗ್ಗಿದ 8 ಮಂದಿಯ ತಂಡ ಮನೆಯವರ ಕೈ-ಕಾಲು ಕಟ್ಟಿಹಾಕಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿತ್ತು. ಪ್ರಕರಣದ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದರೂ ಕಳ್ಳರ ಪತ್ತೆಯಾಗಿರಲಿಲ್ಲ. ಆರೋಪಿ ಪುತ್ತೂರಿನಲ್ಲಿರುವ ಬಗ್ಗೆ ಮಾಹಿತಿ ಪಡೆದ ಕಾಸರಗೋಡು ಕ್ರೈಂ ಬ್ರಾೃಂಚ್ ಡಿವೈಎಸ್‌ಪಿ ಮಧುಸೂದನನ್ ನಾಯರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿತು.