ಮುಡಿಪು ಸಮೀಪದ ಕಾಯರಗೋಳಿ ಮುಡಿಪು ಆಡಿಟೋರಿಯಂ, ಗುಳಿಗನ ಕಟ್ಟೆ ಬಳಿಯ ನಿವಾಸಿ ಭವಾನಿ ಆಚಾರ್ಯ ಅವರ ಮನೆಯಲ್ಲಿ ಮಧ್ಯಾಹ್ನ 1:30 ರಿಂದ 1: 45ರ ಹೊತ್ತಿಹೆ ಘಟನೆ ನಡೆದಿದ್ದು ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಭವಾನಿ ಆಚಾರ್ಯ ಒಬ್ಬರೇ ಮನೆಯಲ್ಲಿದ್ದ ಸಮಯದಲ್ಲಿ ಇಬ್ಬರು ದುಷ್ಕರ್ಮಿಗಳು ಬಾಗಿಲು ಬಡಿದಿದ್ದಾರೆ. ಒಂದು ಬಾಗಿಲು ತೆರೆದ ಭವಾನಿ, ಮನೆಯಲ್ಲಿ ಯಾರು ಇಲ್ಲ ಎಂದು ಹೇಳುತ್ತಿದ್ದಂತೆಯೇ ದುಷ್ಕರ್ಮಿಗಳು ಏಕಾಏಕಿ ಮನೆ ಒಳಗೆ ನುಗ್ಗಿ ಭವಾನಿ ಅವರ ಎರಡು ಕೈಯನ್ನು ಬಿಗಿಹಿಡಿದು ಬೊಬ್ಬೆ ಹೊಡೆಯದಂತೆ ಬಾಯಿಯನ್ನು ಮುಚ್ಚಿ ಅವರ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಕೈಯಲ್ಲಿದ್ದ ಒಂದು ಬಳಿಯನ್ನು ತೆಗೆದಿದ್ದಾರೆ.
ಕೈಯಲ್ಲಿದ್ದ ಮತ್ತೊಂದು ಬಳೆಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಂತೆ ಭವಾನಿ ಆಚಾರ್ಯರು ಪ್ರತಿರೋಧ ವ್ಯಕ್ತಪಡಿಸಿದ್ದು ಬಳೆ ಕಿತ್ತೆಗೆಯಲು ಶತ ಪ್ರಯತ್ನ ನಡೆಸಿದ್ದು ಪ್ರಯೋಜನ ಆಗದಿದ್ದರಿಂದ ಹತಾಶರಾಗಿ ಭವಾನಿ ಅವರನ್ನು ದೂಡಿ ಮನೆಯ ಹೊರಬಂದು ಹೊರಗಿನಿಂದ ಮನೆಯ ಬಾಗಿಲ ಚಿಲಕವನ್ನು ಹಾಕಿ ಪರಾರಿಯಾಗಿದ್ದಾರೆ.
ಭವಾನಿ ಆಚಾರ್ಯ ಅವರ ಮಗಳು ಮನೆಗೆ ಬಂದು ಬಾಗಿಲು ತೆಗೆದು ಒಳಗೆ ಪ್ರವೇಶಿಸಿದಾಗ ತಾಯಿ ನಿತ್ರಾಣಗೊಂಡಿದ್ದನ್ನು ಕಂಡು ತಕ್ಷಣವೇ ತಮ್ಮ ಪ್ರಶಾಂತ್ ಆಚಾರ್ಯಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪ್ರಶಾಂತ್ ಅವರು ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಹಿಂದಿನ ದಿನವೂ ಬಂದಿದ್ದ ದುಷ್ಕರ್ಮಿಗಳು! ಮನೆಗೂ ಭಾನುವಾರ ಆಗಮಿಸಿದ್ಸ ಇಬ್ಬರು ದುಷ್ಕರ್ಮಿಗಳು ಮನೆಯ ಬಾಗಿಲು ಬಡಿದಾಗ ಮನೆಯೊಳಗಿದ್ದ ಮಹಿಳೆ ಬಾಗಿಲನ್ನು ತೆರೆಯದೆ ಕಿಟಕಿಯನ್ನು ತೆರೆದು ಬಂದವರನ್ನು ವಾಪಸ್ ಕಳಿಸಿದ್ದರು.
ಕೊಣಾಜಿ ಪೊಲೀಸರ ಸ್ಥಳೀಯ ಅಂಗಡಿಗಳ ಸಿಸಿ ಟಿ ವಿ ಫೂಟೇಜ್ ಪರಿಶೀಲಿಸಿದ್ದಾರೆ.