ಕೆಸರುಗದ್ದೆಯಾಗಿ ಮಾರ್ಪಾಡಾದ ರಸ್ತೆ

ಕೆಸರು ಗದ್ದೆಯಂತಾಗಿರುವ ಬೇಳ ಗ್ರಾಮದ ದರ್ಬೆತ್ತಡ್ಕ-ನಾನಿಲಪಳ್ಳ-ಮುಖಾರಿಕಂಡ ರಸ್ತೆ.
ಕೆಸರು ಗದ್ದೆಯಂತಾಗಿರುವ ಬೇಳ ಗ್ರಾಮದ ದರ್ಬೆತ್ತಡ್ಕ-ನಾನಿಲಪಳ್ಳ-ಮುಖಾರಿಕಂಡ ರಸ್ತೆ.
Published on
ಬದಿಯಡ್ಕ: ದಿನಂಪ್ರತಿ ನೂರಾರು ಮಂದಿ ಸಂಚರಿಸುವ ರಸ್ತೆಯೊಂದು ಇನ್ನೂ ಡಾಮರು ಕಾಣದೆ ಮಳೆಗೆ ಕೆಸರುಗದ್ದೆಯಾಗಿ ಮಾರ್ಪಾಡಾಗಿ ಸಂಚಾರಕ್ಕೆ ತೀರಾ ಸಮಸ್ಯೆಯಾಗಿದೆ.
ಬೇಳ ಗ್ರಾಮದ ದರ್ಬೆತ್ತಡ್ಕ-ನಾನಿಲಪಳ್ಳ-ಮುಖಾರಿಕಂಡವನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸುಮಾರು ಒಂದೂವರೆ ಕಿಲೋ ಮೀಟರ್ ಉದ್ದದ ಈ ರಸ್ತೆಯ ಇಕ್ಕೆಲಗಳಲ್ಲಿ ಹಲವು ಮನೆಗಳಿವೆ. ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಸಹಿತ ವಿವಿಧ ಅಗತ್ಯಗಳಿಗಾಗಿ ಈ ಭಾಗದ ಜನತೆ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಮಳೆಯಿಂದಾಗಿ ರಸ್ತೆ ರಾಡಿಯೆದ್ದು ಕೆಸರುಗದ್ದೆಯಂತಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿಯಿದೆ.
ಕೆಂಪು ಕಲ್ಲಿನ ಲಾರಿಗಳು, ಮರ ಸಾಗಾಟದ ಲಾರಿಗಳ ನಿರಂತರ ಸಂಚಾರದಿಂದಾಗಿ ರಸ್ತೆ ಗುಂಡಿಬಿದ್ದು ಸಂಪೂರ್ಣ ಹದಗೆಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಗಾಲ ಮುಗಿದ ಬಳಿಕ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬಿಡಿಕೆ_31 ಆಗಸ್ಟ್‌_01
ಕೆಸರು ಗದ್ದೆಯಂತಾಗಿರುವ ಬೇಳ ಗ್ರಾಮದ ದರ್ಬೆತ್ತಡ್ಕ-ನಾನಿಲಪಳ್ಳ-ಮುಖಾರಿಕಂಡ ರಸ್ತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net