ಸರಕು ಸಾಗಾಟ ವಾಹನಗಳಿಗೆ ವೇಗ ಮಿತಿ ಕಡ್ಡಾಯ

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿಯ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಹರಿರಾಮ್​ ಶಂಕರ್​, ಮಹಾಂತೇಶ್​ ಹಂಗರಗಿ, ಕಿರಣ್​ ಎಸ್​., ಅಬ್ದುಲ್ಲ ಮೊಹಮ್ಮದ್​ ಅಜ್ಮಿ ಇತರರಿದ್ದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿಯ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಹರಿರಾಮ್​ ಶಂಕರ್​, ಮಹಾಂತೇಶ್​ ಹಂಗರಗಿ, ಕಿರಣ್​ ಎಸ್​., ಅಬ್ದುಲ್ಲ ಮೊಹಮ್ಮದ್​ ಅಜ್ಮಿ ಇತರರಿದ್ದರು.
Published on

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ

* ಅಧಿಕಾರಿಗಳೊಂದಿಗೆ ರಸ್ತೆ ಸುರಕ್ಷತಾ ಸಮಿತಿ ಸಭೆ 

ಉಡುಪಿ: ಸಾರ್ವಜನಿಕ ವಾಹನಗಳ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳ ನಿರ್ವಹಣೆ ಮಾಡಬೇಕು. ಅಲ್ಲದೆ, ಸರಕುಗಳ ಸಾಗಾಟದ ವಾಹನಗಳಿಗೆ ಪ್ರತಿ ಗಂಟೆಗೆ 60 ಕಿಮೀ ವೇಗ ಮಿತಿಯ ಸ್ಪೀಡ್​ ಗವರ್ನರ್​ ಕಡ್ಡಾಯವಾಗಿ ಅಳವಡಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಜೂ.29) ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಮಿತಿಯ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಒಳಗೆ ಸಂಚರಿಸುವ 6 ಚಕ್ರ ಮತ್ತು ಮೇಲ್ಪಟ್ಟ ಎಲ್ಲ ಸರಕು ಸಾಗಾಟ ವಾಹನಗಳಿಗೆ ಸ್ಪೀಡ್​ ಗವರ್ನರ್​ ಕಡ್ಡಾಯ ಎಂದರು.
ತ್ವರಿತ ಕ್ರಮ ಕೈಗೊಳ್ಳಿ
ಕಾಂಕ್ರೀಟ್​ ಮಿಕ್ಸಿಂಗ್​ ವಾಹನಗಳ ಸಂಚಾರದಿಂದ ಕಾಂಕ್ರೀಟ್​ ಬಿದ್ದು ರಸ್ತೆ ಹಾಳಾಗುತ್ತಿದೆ. ಮರಳು ಸಾಗಿಸುವ ಲಾರಿ ಇನ್ನಿತರ ವಾಹನಗಳು ಓವರ್​ ಲೋಡ್​ ಮಾಡಿಕೊಂಡು ಬರುವುದರಿಂದ ತೊಂದರೆ ಹಾಗೂ ಅಪಘಾತಗಳೂ ಹೆಚ್ಚುತ್ತಿದ್ದೆ. ಇವುಗಳ ನಿಯಂತ್ರಣಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು,  ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕು. ಇನ್ನಿತರ ವಾಹನಗಳ ಚಾಲಕರೂ ಸಹ ರಸ್ತೆ ಸುರಕ್ಷತಾ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಅದರಿಂದ ಅಪಘಾತ ಸಂಖ್ಯೆ ಇಳಿಕೆಯೂ ಆಗಲಿದೆ ಎಂದರು.

ಗೂಡಂಗಡಿ ತೆರವುಗೊಳಿಸಿ

ಸಂಚಾರ ದಟ್ಟಣೆ ಇರುವ ನಗರ ಭಾಗದಲ್ಲಿ ವಾಹನಗಳ ಪಾರ್ಕಿಂಗ್​ಗೆ ಅವಕಾಶ ನೀಡಬಾರದು. ರಸ್ತೆ ಬದಿಯಲ್ಲಿರುವ ಅನಧಿಕೃತ ಗೂಡಂಗಡಿ, ಫಾಸ್ಟ್​ ಫುಡ್​ ಅಂಗಡಿ, ತಳ್ಳುವಗಾಡಿ ತೆರವುಗೊಳಿಸಿ. ವೆಂಡಿಂಗ್ ಝೋನ್​ಗಳನ್ನು ಗುರುತಿಸಿ ಬದಲಿ ವ್ಯವಸ್ಥೆ ಮಾಡುವಂತೆ ನಗರಸಭಾ ಆಯುಕ್ತರಿಗೆ ತಿಳಿಸಿದರು. 
ಸಭೆಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​, ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತ ಕಿರಣ್​ ಎಸ್​., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲ ಮೊಹಮ್ಮದ್​ ಅಜ್ಮಿ, ಇಂಜಿನಿರ್​ಗಳು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಬಸ್ಸಿನೊಳಗೆ ಅಳವಡಿಸಿ ಕಸದ ಬುಟ್ಟಿ

ಶಾಲಾ-ಕಾಲೇಜುಗಳ ಪರಿಮಿತಿಯ ರಸ್ತೆಗಳಲ್ಲಿ ಹಾಗೂ ಈಗಾಗಲೇ ಗುರುತಿಸಿರುವ 18 ಬ್ಲಾ$್ಯಕ್​ ಸ್ಪಾಟ್​ಗಳಲ್ಲಿ ಸೂಚನಾ ಫಲಕ, ಹಂಪ್ಸ್​, ವೇಗ ತಡೆ, ಬ್ಯಾರಿಕೇಡ್​, ಝೀಬ್ರಾ ಪಟ್ಟಿ ಸೇರಿದಂತೆ ಇನ್ನಿತರ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರು ಬಸ್​ಗಳಲ್ಲಿ ಸಂಚರಿಸುವಾಗ ತಿಂಡಿ&ತಿನಿಸುಗಳ ಕಸ, ನೀರಿನ ಬಾಟೆಲ್​ಗಳನ್ನು ಹೊರಗೆ ಎಸೆಯುತ್ತಾರೆ. ಅದು ಪರಿಸರದ ಹಾನಿಗೂ ಕಾರಣವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಎಲ್ಲ ಬಸ್​ಗಳಲ್ಲಿಯೂ ಕಸದ ಬುಟ್ಟಿ ಅಳವಡಿಸಲೇಬೇಕು. ಈ ಕುರಿತು ಆರ್​ಟಿಒ ಕ್ರಮವಹಿಸಬೇಕು ಎಂದು ಡಿಸಿ ಸೂಚಿಸಿದರು.

ಬಾಗಿಲು ಇದ್ದರಷ್ಟೇ ನೀಡಿ ಪರವಾನಗಿ

ಜಿಲ್ಲೆಯಲ್ಲಿ ಸಂಚರಿಸುವ ಎಲ್ಲ ಖಾಸಗಿ ಹಾಗೂ ಸರ್ಕಾರಿ ಬಸ್​ಗಳಲ್ಲಿ ಕಡ್ಡಾಯವಾಗಿ ಬಾಗಿಲು ಅಳವಡಿಸಿರುವಂತೆ ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೂ ಸಹ ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗಿಲ್ಲ. ಬಾಗಿಲು ಅಳವಡಿಸಿದ ಹಾಗೂ ಅಳವಡಿಸದ ಬಸ್​ಗಳ ಸಂಖ್ಯೆ ತಿಳಿಸಬೇಕು. ಬಾಗಿಲು ಅಳವಡಿಸದೇ ಇರುವ ಬಸ್​ಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಎರಡು ವಾರಗಳ ಒಳಗೆ ವರದಿ ಒಪ್ಪಿಸಬೇಕು. ವಾಹನಗಳ ಫಿಟ್ನೆಸ್​ ನವೀಕರಣಕ್ಕೆ ಬಂದಾಗ ಬಾಗಿಲು ಇದ್ದಲ್ಲಿ ಮಾತ್ರ ಸಂಚಾರ ಅನುಮತಿ ಪ್ರಮಾಣ ಪತ್ರ ನೀಡಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net