ಪಂಚಾಯಿತಿ ಅನುದಾನ ಮೂಲಕ ರಸ್ತೆಯನ್ನು 615 ಮೀಟರ್‌ವರೆಗೆ ಸುಮಾರು 11 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟೀಕರಣ ಹಾಗೂ ಡಾಂಬರೀಕರಣದೊಂದಿಗೆ ಅಭಿವೃದ್ಧಿಪಡಿಸಲಾಗಿತ್ತು. ಕಾಮಗಾರಿ ಪೂರ್ಣವಾಗಿ ಮೂರು ತಿಂಗಳು ಕಳೆಯುತ್ತಿದ್ದಂತೆ ರಸ್ತೆಯ ಡಾಂಬರು ಹಾಗೂ ಕಾಂಕ್ರೀಟ್ ಕಿತ್ತು ಬರಲಾರಂಭಿಸಿವೆ. ಮಳೆಗಾಲದಲ್ಲಿ ಅತ್ಯಂತ ಶಿಥಿಲಗೊಳ್ಳುವ ರಸ್ತೆಯಾಗಿದ್ದು ಕಾಂಕ್ರೀಟೀಕರಣದ ಬಗ್ಗೆ ಸಂತೋಷಗೊಂಡಿದ್ದ ಊರಿನ ಜನರಿಗೆ ಈಗ ನಿರಾಸೆಯಾಗಿದೆ.