ಉಪ್ಪಿನಂಗಡಿಯಲ್ಲಿ ನದಿ ನೀರು ಇಳಿಕೆ

 ನೇತ್ರಾವತಿ ನದಿಯಲ್ಲಿ ಸೋಮವಾರದ ಜಲಮಟ್ಟ.
ನೇತ್ರಾವತಿ ನದಿಯಲ್ಲಿ ಸೋಮವಾರದ ಜಲಮಟ್ಟ.
Published on

ಉಪ್ಪಿನಂಗಡಿ: ಶನಿವಾರ ಮತ್ತು ಭಾನುವಾರ ಅಪಾಯದ ಮಟ್ಟದ ಸನಿಹದಲ್ಲಿ ಹರಿದು ನೆರೆ ಭೀತಿ ಮೂಡಿಸಿದ್ದ ಇಲ್ಲಿನ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆ ಆಗಿದ್ದು, ಸೋಮವಾರ ಸಂಜೆ ಸುಮಾರಿಗೆ 27.4 ಮೀಟರ್ ದಾಖಲಾಗಿ ನೆರೆ ಭೀತಿ ದೂರಮಾಡಿದೆ.

ಭಾನುವಾರ ಈ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದ ಕಾರಣ ನದಿಗಳಲ್ಲಿ ಪ್ರವಾಹ ಹೆಚ್ಚಾಗಿ ನೀರಿನ ಮಟ್ಟ ಸಮುದ್ರಮಟ್ಟಕಿಂತ 30.3 ಮೀಟರ್‌ನಷ್ಟು ಇತ್ತು. ಆದರೆ ಭಾನುವಾರ ಸಂಜೆಯಿಂದ ಇಳಿಮುಖ ಕಾಣಿಸಿದ ನದಿಯ ನೀರು ಸೋಮವಾರ ಗಣನೀಯ ಇಳಿಕೆ ದಾಖಲಿಸಿ ನೆರೆ ಭೀತಿ ದೂರವಾಗಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net