

ವಿಜಯವಾಣಿ ಸುದ್ದಿಜಾಲ ಕುಂದಾಪುರ
ರಾಷ್ಟ್ರೀಯ ಹೆದ್ದಾರಿ 66ರ ಸೌಪರ್ಣಿಕಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅರಾಟೆಯ ಹಳೆಯ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿದ್ದರಿಂದ ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅನುವು ವಾಡಿಕೊಡಲಾಗಿದೆ. ಇದರಿಂದ ಅರಾಟೆಯಿಂದ ಮೂವತ್ತುಮುಡಿ ಕನ್ನಡಕುದ್ರುವಿನವರೆಗಿನ ರಾಷ್ಟ್ರೀಯ ಹೆದ್ದಾರಿ 66 ಅಪಘಾತ ವಲಯವಾಗಿ ವಾರ್ಪಟ್ಟಿದ್ದು, ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ.
ಸೇತುವೆ ದುರಸ್ತಿಗಾಗಿ ಕಳೆದ ನ.25ರಿಂದ ಹಳೇ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿ, ಹೊಸ ಸೇತುವೆಯಲ್ಲಿಯೇ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ವಾಡಲಾಗಿದೆ. ಇದರಿಂದಾಗಿ ಇಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಲೇ ಇವೆ. ಈವರೆಗೆ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಎರಡು ದಿನಕ್ಕೊಂದರಂತೆ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ದಟ್ಟಣೆ ಹೆಚ್ಚಿರುವ ದಿನಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಹೆದ್ದಾರಿಯ ಒಂದೇ ವಾರ್ಗದಲ್ಲಿ ಎರಡೂ ಕಡೆಗಳ ವಾಹನಗಳನ್ನು ಬಿಡಲಾಗುತ್ತಿದ್ದು, ಹೊಸ ಸೇತುವೆಯನ್ನು ವಿಭಾಗಿಸಿ ಕೋನುಗಳನ್ನು ಹಾಕಲಾಗಿದೆ. ಆದರೆ ಅವುಗಳು ಮುರಿದು ಹೋಗಿವೆ. ಸಿಗ್ನಲ್ ಲೈಟ್ ಹಾಗೂ ಅಲ್ಲಲ್ಲಿ ಹಂಪ್ ಹಾಕಿದ್ದರೂ ಏನೂ ಪ್ರಯೋಜನವಿಲ್ಲ. ಮೂವತ್ತುಮುಡಿ ಹಾಗೂ ಅರಾಟೆ ಎರಡೂ ಕಡೆ ಡೈವರ್ಶನ್ ತೆಗೆದುಕೊಳ್ಳುವಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲ. ಇದರಿಂದ ರಾತ್ರಿ ಸಂಚಾರ ಕಷ್ಟವಾಗಿದೆ. ಡೈವರ್ಶನ್ ಇರುವಲ್ಲಿ ಮುನ್ನೆಚ್ಚರಿಕೆ ಫಲಕ ಕೂಡ ಅಳವಡಿಸಿಲ್ಲ.
ಶಿಥಿಲಗೊಂಡಿರುವ 58 ವರ್ಷಗಳಷ್ಟು ಹಳೆಯದಾದ ಸೇತುವೆಯನ್ನು ದುರಸ್ತಿ ವಾಡಬೇಕು. ಆದರೆ ಸೇತುವೆ ದುರಸ್ತಿಯಾಗುವವರೆಗೆ ಹೊಸ ಸೇತುವೆ ಪ್ರದೇಶದಲ್ಲಿ ಸುಗಮ ಸಂಚಾರಕ್ಕೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.