

ಕಾರ್ಕಳ: ಬೆಳ್ಮಣ್ನಲ್ಲಿ ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಪಿಲಾರು ಗ್ರಾಮದ ಕುಂಜಿಗುಡ್ಡೆ ನಿವಾಸಿ ತ್ರಿಶಾಂತ್ ಯಾನೆ ಪುನೀತ್(19) ಎಂಬುವರು ಸಾವನ್ನಪ್ಪಿದ ಟನೆ ಶನಿವಾರ ನಡೆದಿದೆ.
ಬೆಳ್ಮಣ್ನಿಂದ ಪಿಲಾರು ಕಡೆಯತ್ತ ಬೈಕ್ನಲ್ಲಿ ವೇಗದಲ್ಲಿ ಹೋಗುತ್ತಿದ್ದಾಗ ಬೆಳ್ಮಣ್ ಸೊಸೈಟಿ ಮುಂಭಾಗದ ರಸ್ತೆ ಬದಿಯಲ್ಲಿ ತಿರುವು ಪಡೆಯಲು ನಿಲ್ಲಿಸಿದ್ದ ಟಿಪ್ಪರಿನ ಮುಂಭಾಗಕ್ಕೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಬೈಕಿನಿಂದ ಎಸೆಯಲ್ಪಟ್ಟು ಟಿಪ್ಪರಿನ ಮುಂಭಾಗಕ್ಕೆ ತಲೆ ಬಡಿದ ಪರಿಣಾಮ ಗಂಭೀರ ಗಾಯವಾಗಿದೆ ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಪುನೀತ್ ಪ್ರತಿಭಾನ್ವಿತನಾಗಿದ್ದು ಡಿ.ಜೆ ಪ್ಲೇಯರ್ ಆಗಿ ಪರಿಸರದಲ್ಲಿ ಗುರುತಿಕೊಂಡಿದ್ದ. ಕಾರ್ಕಳ ಗ್ರಾವಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.