ಆಟೋ ಮಾಲೀಕರು, ಭಾನುವಾರ ಸಂಜೆ ಕುಟುಂಬದ ಜತೆಗೆ ಬೀಚ್‌ಗೆ ತೆರಳಿ ಹಿಂದಿರುಗಿ ಮನೆಗೆ ಬರುವಾಗ, ಕೀ ಮರೆತು ಆಟೋದಲ್ಲಿ ಬಿಟ್ಟಿದ್ದರು. ರಿಕ್ಷಾದಲ್ಲೇ ಇದ್ದ ಕೀಯಿಂದಾಗಿ ಕಳ್ಳ ಸುಲಭ ರಿಕ್ಷಾ ಕದ್ದು ತಂದಿದ್ದ. ಗ್ಯಾಸ್ ಚಾಲಿತ ರಿಕ್ಷಾವಾಗಿದ್ದು, ಬೆಳ್ತಂಗಡಿ ತಲುಪುತ್ತಿದ್ದಂತೆ ಗ್ಯಾಸ್ ಖಾಲಿಯಾಗತೊಡಗಿದೆ. ಹೀಗಾಗಿ ಕಳ್ಳ, ನಿಲ್ಲಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆಟೋದಲ್ಲಿ ಡೀಸೆಲ್ ಕ್ಯಾನ್ ಹಾಗೂ ಬೀಗಗಳು ಪತ್ತೆಯಾಗಿವೆ. ಈ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು.