ಅವರ ವಿಚಾರಣೆ ನಡೆಸಿದಾಗ ಸರಿಯಾಗಿ ಮಾತನಾಡುತ್ತಿರಲಿಲ್ಲ. ಮೇಲ್ನೋಟಕ್ಕೆ ಅವರಿಗೆ ಮರೆವು ಕಾಯಿಲೆ ಅಥವಾ ಖಿನ್ನತೆಗೊಳಗಾದಂತೆ ತೋರುತ್ತಿದ್ದರು. ಅವರ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ ಗುರುತು ಚೀಟಿ ಪತ್ತೆಯಾಯಿತು. ಅದರಲ್ಲಿ ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ನಿವೃತ್ತರಾಗಿರುವುದು ಹಾಗೂ ತಮಿಳುನಾಡು ರಾಜ್ಯದವರೆಂಬ ಮಾಹಿತಿ ತಿಳಿಯಿತು.