ಸಾಮಾಜಿಕ ಏಕತೆಯ ಪ್ರತೀಕ ದೇವಾಲಯ

ಹೀರೆಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವರ ಜೀರ್ಣೋದ್ಧಾರ ಕಾರ್ಯದಲ್ಲಿ ಗುರ್ಮೆ ಸುರೇಶ್​ ಶೆಟ್ಟಿ ಪಾಲ್ಗೊಂಡರು. ಶ್ರೀನಿಧಿ ಹೆಗ್ಡೆ, ಪ್ರಕಾಶ್​ ನಾಯಕ್​, ಸೀತಾರಾಮ್​ ಭಟ್​, ಚಂದ್ರಶೇಖರ್​ ನಾಯಕ್​, ಜಯಪ್ರಕಾಶ್​ ನಾಯಕ್​, ಪಾಂಡುರಂಗ ಎಲ್​. ಇತರರಿದ್ದರು.
ಹೀರೆಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವರ ಜೀರ್ಣೋದ್ಧಾರ ಕಾರ್ಯದಲ್ಲಿ ಗುರ್ಮೆ ಸುರೇಶ್​ ಶೆಟ್ಟಿ ಪಾಲ್ಗೊಂಡರು. ಶ್ರೀನಿಧಿ ಹೆಗ್ಡೆ, ಪ್ರಕಾಶ್​ ನಾಯಕ್​, ಸೀತಾರಾಮ್​ ಭಟ್​, ಚಂದ್ರಶೇಖರ್​ ನಾಯಕ್​, ಜಯಪ್ರಕಾಶ್​ ನಾಯಕ್​, ಪಾಂಡುರಂಗ ಎಲ್​. ಇತರರಿದ್ದರು.
Published on

* ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಅಭಿಮತ 

* ಮಹಾಲಿಂಗೇಶ್ವರ ದೇಗುಲದ ಜೀರ್ಣೋದ್ಧಾರದಲ್ಲಿ ಭಾಗಿ

ಉಡುಪಿ: ಸಹಸ್ರಮಾನ ಇತಿಹಾಸ ಹೊಂದಿರುವ ದೇವಾಲಯಗಳ ಜೀರ್ಣೋದ್ಧಾರವೆಂದರೆ ಕಟ್ಟಡದ ನವೀಕರಣವಲ್ಲ. ಅದು ಪೂರ್ವಜರು ಕಟ್ಟಿಕೊಟ್ಟ ಸಂಸ್ಕೃತಿ. ಮುಂದಿನ ಪೀಳಿಗೆಗೆ ಧಾರ್ಮಿಕ ಪರಂಪರೆ ಉಳಿಸಿ ಕೊಡುವ ಮಹತ್ವದ ಕೆಲಸ. ಇವು ಪೂಜಾ ಕೇಂದ್ರಗಳಷ್ಟೇ ಅಲ್ಲ, ಸಾಮಾಜಿಕ ಏಕತೆಯ ಪ್ರತೀಕವಾಗಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಹೇಳಿದರು.
ಉಡುಪಿ ತಾಲೂಕಿನ ಹಿರಿಯಡ್ಕ ಸಮೀಪದ ಹೀರೆಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವರ ಜೀಣೋರ್ದ್ಧಾರ ಸಮಿತಿ ವತಿಯಿಂದ ನಡೆಯುತ್ತಿರುವ ದೇಗುಲದ ಜೀಣೋರ್ದ್ಧಾರ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಇಂತಹ ಪುಣ್ಯ ಕಾರ್ಯಗಳಿಗೆ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದರು.
ಸಮಿತಿಯ ಅಧ್ಯಕ್ಷ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್​ ನಾಯಕ್​, ಪ್ರಮುಖ ಪದಾಧಿಕಾರಿಗಳಾದ ಸೀತಾರಾಮ್​ ಭಟ್​, ಖಜಾಂಚಿ ಚಂದ್ರಶೇಖರ್​ ನಾಯಕ್​, ಜಯಪ್ರಕಾಶ್​ ನಾಯಕ್​, ಪಾಂಡುರಂಗ ಎಲ್​., ಮಂದಾರ ಮೋಘೆ, ಶಿಲ್ಪಿ ಕುಪ್ಪು ಸ್ವಾಮಿ, ಶ್ರೀಧರ ಭಟ್​, ರಾಜಾರಾಮ್​ ಭಟ್​, ಹರೀಶ್​ ಶೆಟ್ಟಿ, ಕಾಳಿದಾಸ್​ ಭಂಡಾರಿ, ಕೃಷ್ಣ ಭಂಡಾರಿ, ಮಹೇಶ್​ ಭಟ್​, ಅಶೋಕ್​ ನಾಯಕ್​, ಶ್ರೀಧರ ನಾಯ್ಕ್​, ಹರ್ಷಿತ್​ ಆಚಾರ್ಯ, ರಮೇಶ್​ ನಾಯಕ್​ ಕಾಳಬೆಟ್ಟು, ವಾಸುದೇವ ನಾಯಕ್​, ಸತೀಶ್​ ಶೆಟ್ಟಿ, ಬಾಲಕೃಷ್ಣ ಭಟ್​, ಮಹೇಶ್​ ಪುತ್ರನ್​, ಸುಧೀರ್​ ಪೂಜಾರಿ, ಭಾಸ್ಕರ್​ ಕುಲಾಲ್​ ಇನ್ನಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net