ವಿಪತ್ತು ಹಾನಿಗಳಿಗೆ ತಕ್ಷಣ ಸ್ಪಂದನೆ ನೀಡಿ

 ಶೌರ್ಯ ವಿಪತ್ತು ತಂಡದ ಕೋರ್ ಕಮಿಟಿ ಸಭೆ ಶುಕ್ರವಾರ ನಡೆಯಿತು. ಶೌರ್ಯ ಮಾಸ್ಟರ್ ಮಂಜುನಾಥ್, ಕ್ಯಾಪ್ಟನ್ ಪುರುಷೋತ್ತಮ್, ಎಲ್ಲ ವಲಯಗಳ ಮೇಲ್ವಿಚಾರಕರು, ಟಕ ಸಂಯೋಜಕರು, ಘಟಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಶೌರ್ಯ ವಿಪತ್ತು ತಂಡದ ಕೋರ್ ಕಮಿಟಿ ಸಭೆ ಶುಕ್ರವಾರ ನಡೆಯಿತು. ಶೌರ್ಯ ಮಾಸ್ಟರ್ ಮಂಜುನಾಥ್, ಕ್ಯಾಪ್ಟನ್ ಪುರುಷೋತ್ತಮ್, ಎಲ್ಲ ವಲಯಗಳ ಮೇಲ್ವಿಚಾರಕರು, ಟಕ ಸಂಯೋಜಕರು, ಘಟಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
Published on
ಬ್ರಹ್ಮಾವರ: ಮಳೆಗಾಲ ಆರಂಭದಲ್ಲಿ ಶೌರ್ಯ ತಂಡದ ಸದಸ್ಯರು ಸದಾ ಎಚ್ಚರವಾಗಿರಬೇಕು. ಅನಿರೀಕ್ಷಿತ ವಿಪತ್ತು ಹಾನಿಗಳಿಗೆ ತಕ್ಷಣ ಸ್ಪಂದನೆ ನೀಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಬ್ರಹ್ಮಾವರ ತಾಲೂಕು ವತಿಯಿಂದ ಯೋಜನಾ ಕಚೇರಿಯಲ್ಲಿ ಶುಕ್ರವಾರ ಶೌರ್ಯ ವಿಪತ್ತು ತಂಡದ ಕೋರ್ ಕಮಿಟಿ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ 91 ತಾಲೂಕುಗಳಲ್ಲಿ 10,400 ಶೌರ್ಯ ಸ್ವಯಂಸೇವಕರು ಸೇವೆ ಸಲ್ಲಿಸಿ ವಿಪತ್ತು ಸೇವೆಗಳ ಜತೆಗೆ ಮೂರು ತಿಂಗಳಿಗೊಮ್ಮೆ ಸಾವಾಜಿಕ ಸೇವೆ, ತಿಂಗಳಿಗೊಮ್ಮೆ ಘಟಕ ಸಭೆ, ತಾಲೂಕಿಗೆ ಒಂದು ಶೌರ್ಯ ವನ ರಚನೆ ಮಾಡಿ ಪರಿಸರದೊಂದಿಗೆ ಮಾನವರು ಜೀವನ ನಡೆಸಬೇಕು ಎಂದರು.
ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶೌರ್ಯ ಘಟಕದ ಸದಸ್ಯರನ್ನು ಅಭಿನಂದಿಸಿದರು. ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಶೌರ್ಯ ಘಟಕಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಶೌರ್ಯ ಮಾಸ್ಟರ್ ಮಂಜುನಾಥ್, ಕ್ಯಾಪ್ಟನ್ ಪುರುಷೋತ್ತಮ್, ಎಲ್ಲ ವಲಯಗಳ ಮೇಲ್ವಿಚಾರಕರು, ಘಟಕ ಸಂಯೋಜಕರು, ಟಕ ಪ್ರತಿನಿಧಿಗಳು ಉಪಸ್ಥಿತರಿದ್ದರು. ಯೋಜನಾಧಿಕಾರಿ ರಮೇಶ್ ಪಿ.ಕೆ. ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net