ಶಿಕ್ಷಕರು, ಸೈನಿಕರನ್ನು ಗೌರವಿಸಿ

 ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ  ವಿತರಿಸಲಾಯಿತು. ಸತೀಶ್ ಬೋಳಾರ್, ಅರ್ಜುನ್ ಭಂಡಾರ್ಕಾರ್, ಮಂಜುನಾಥ ಆಚಾರ್ಯ ಮುಂತಾದವರಿದ್ದರು.
ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸತೀಶ್ ಬೋಳಾರ್, ಅರ್ಜುನ್ ಭಂಡಾರ್ಕಾರ್, ಮಂಜುನಾಥ ಆಚಾರ್ಯ ಮುಂತಾದವರಿದ್ದರು.
Published on
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಹಾಗೂ ಭದ್ರಾ ಗ್ಯಾಸ್ ಏಜನ್ಸಿ ಬಂಟ್ವಾಳ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿನ 58 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಮಾತನಾಡಿ, ಹಿರಿಯರು, ಶಿಕ್ಷಕರು, ಸೈನಿಕರನ್ನು ಗೌರವಿಸಿ. ಸಮಾಜಕ್ಕೆ ಒಳಿತನ್ನು ಮಾಡಿ, ಮುಂಬರುವ ದಿನಗಳಲ್ಲಿ ತಾವು ಪಡೆದುದಕ್ಕಿಂತ ಹತ್ತು ಪಟ್ಟು ಹೆಚ್ಚು ಮೊತ್ತವನ್ನು ಸಮಾಜಕ್ಕೆ ನೀಡುವಂತಾಗಿ ಎಂದು ಆಶಿಸಿದರು.
ರೋಟರಿ ಕ್ಲಬ್ ಬಂಟ್ವಾಳದ 58ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅರ್ಜುನ್ ಭಂಡಾರ್ಕಾರ್ ಮತ್ತು ಮಂಜುನಾಥ ಆಚಾರ್ಯ ಸಹಯೋಗ ನೀಡಿದ್ದಾರೆ ಎಂದು ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಹೇಳಿದರು.
ಸಹಪ್ರಾಯೋಜಕರಾದ ಭದ್ರಾ ಗ್ಯಾಸ್ ಏಜನ್ಸಿ ಮಾಲೀಕ ಹಾಗೂ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಮಂಜುನಾಥ ಆಚಾರ್ಯ ಮಾತನಾಡಿ, ಭದ್ರಾ ಗ್ಯಾಸ್ ಏಜನ್ಸಿಯ 40ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸೇವಾ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಇಂಟರ‌್ಯಾಕ್ಟ್ ಶಾಲೆಗಳ ಮೂಲಕ ವಿದ್ಯಾರ್ಥಿಗಳು ಆಯ್ಕೆ ಆಗಿದೆ. ಒಟ್ಟು 5 ಲಕ್ಷ ರೂ ಮೊತ್ತವನ್ನು ಒದಗಿಸಲಾಗಿದೆ ಎಂದರು.
ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕಾರ್ ಮಾತನಾಡಿದರು. ರೋಟರಿ ಸದಸ್ಯ ಮಧ್ವ ಆಚಾರ್ಯ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕೃಷ್ಣ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್‌ನ ಭಾಗ್ಯಶ್ರೀ ಭಂಡಾರ್ಕರ್, ರೋಟರಿ ಬಂಟ್ವಾಳ ಕಾರ್ಯದರ್ಶಿ ರವಿರಾಜ ಶೆಟ್ಟಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಐತಪ್ಪ ಪೂಜಾರಿ ವಂದಿಸಿದರು. ಸದಸ್ಯ ಅಹಮದ್ ಮುಸ್ತಫಾ ಕಾರ್ಯಕ್ರಮ ನಿರ್ವಹಿಸಿದರು.

ವಿದ್ಯಾರ್ಥಿಗಳು ತಮ್ಮ ಕಂಫರ್ಟ್ ಜೋನ್‌ನಿಂದ ಹೊರಬರಲು ಪ್ರಯತ್ನಿಸಬೇಕು. ಸಕರಾತ್ಮಕ ವಿಚಾರಗಳನ್ನು ಹೊಂದಿರಬೇಕು. ಜೀವನದ ಪ್ರತಿ ಕ್ಷಣವೂ ಅಧ್ಯಯನಕ್ಕೆ ಮೀಸಲಾಗಿದ್ದು, ಎಚ್ಚರ, ಪ್ರಯತ್ನಶೀಲರಾಗುವುದರ ಜತೆಗೆ ನಿರ್ದಿಷ್ಟವಾದ ಗುರಿ ಸಾಧನೆಗೆ ಬದುಕನ್ನು ಮುಡಿಪಾಗಿಟ್ಟುಕೊಳ್ಳಬೇಕು. ಸಮಾಜದ ಕಷ್ಟಗಳಿಗೆ ಬೆನ್ನೆಲುಬಾಗಿ ನಿಂತು ಸಹಕಾರ ನೀಡಬೇಕು. ಸ್ಕಾಲರ್‌ಶಿಪ್ ಪಡೆಯುವುದು ಹಕ್ಕಲ್ಲ ಜವಾಬ್ದಾರಿ ಎಂಬುದನ್ನು ಅರಿತುಕೊಳ್ಳಬೇಕು. ಎಲ್ಲ ಮಕ್ಕಳನ್ನು ನಾವು ಖುದ್ದಾಗಿ ಭೇಟಿಯಾಗಿ ಅವರ ಪಾಲಕರನ್ನು ಮಾತನಾಡಿಸಿ, ಸಮಸ್ಯೆಗಳನ್ನು ಆಲಿಸಿದ್ದು, ಅದಕ್ಕನುಸಾರವಾಗಿ ಮೊತ್ತವನ್ನು ನಿಗದಿಪಡಿಸಿ ವಿತರಣೆ ಮಾಡಲಾಗಿದೆ.

— ಅರ್ಜುನ್ ಭಂಡಾರ್ಕಾರ್, ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ


ಬಿಟಿಡಬ್ಲ್ಯು_ಜು26_1
ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸತೀಶ್ ಬೋಳಾರ್, ಅರ್ಜುನ್ ಭಂಡಾರ್ಕಾರ್, ಮಂಜುನಾಥ ಆಚಾರ್ಯ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net