ವಸ್ತುನಿಷ್ಠ ವರದಿಗಾರಿಕೆಯಿಂದ ಸಮಾಜದಲ್ಲಿ ಗೌರವ

 ಪತ್ರಿಕಾ ದಿನಾಚರಣೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಪುಷ್ಪರಾಜ ಬಿ.ಎನ್., ಸಂದೇಶ್ ಜೈನ್, ಹರೀಶ್ ಕುಮಾರ್, ಶ್ರೀನಿವಾಸ ಇಂದಾಜೆ, ಭುವನೇಶ್ವರ ಜಿ. ಮೊದಲಾದವರು ಉಪಸ್ಥಿತರಿದ್ದರು.
ಪತ್ರಿಕಾ ದಿನಾಚರಣೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಪುಷ್ಪರಾಜ ಬಿ.ಎನ್., ಸಂದೇಶ್ ಜೈನ್, ಹರೀಶ್ ಕುಮಾರ್, ಶ್ರೀನಿವಾಸ ಇಂದಾಜೆ, ಭುವನೇಶ್ವರ ಜಿ. ಮೊದಲಾದವರು ಉಪಸ್ಥಿತರಿದ್ದರು.
Published on
ಬೆಳ್ತಂಗಡಿ: ವಸ್ತುನಿಷ್ಠೆಯನ್ನು ನಿರಂತರವಾಗಿ ಕಾಪಾಡಿಕೊಂಡರೆ ಮಾತ್ರ ಸಮಾಜ ಪತ್ರಕರ್ತರನ್ನು ಗುರುತಿಸುತ್ತದೆ. ಸತ್ಯದ ವರದಿಗೆ ಜನರು ಸ್ಪಂದಿಸುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ಸಮಾಜಕ್ಕೆ ಸ್ಪಂದಿಸಿದರೆ ಮಾತ್ರ ಪರಿವರ್ತನೆ ಸಾಧ್ಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ತಾಲೂಕು ಪತ್ರಕರ್ತರ ಸಂಘ ವತಿಯಿಂದ ಬೆಳ್ತಂಗಡಿಯಲ್ಲಿ ಶನಿವಾರ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಮ್ ಬಿ. ಅಧ್ಯಕ್ಷತೆ ವಹಿಸಿದ್ದರು. ನಾಲ್ಕು ಅಸಹಾಯಕ ಕುಟುಂಬಗಳಿಗೆ ‘ದಿತಿ ಸಾಂತ್ವನ ನಿಧಿ’ಯನ್ನು ಶಾಸಕರು ಹಸ್ತಾಂತರಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವೇಣೂರು ಪ್ರೌಢಶಾಲೆಯ ಸಮೃದ್ಧಿ ಜೈನ್, ಗುರುವಾಯನಕೆರೆ ಪ್ರೌಢಶಾಲೆಯ ಮೊಹಮ್ಮದ್ ಶಹಜಾದ್ ಹಾಗೂ ಸವಣಾಲು ಪ್ರೌಢಶಾಲೆಯ ಅಪೇಕ್ಷಾ, ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಸುನೀಲ್ ಹೆಗ್ಡೆ, ಮಂಜುವಾಣಿ ಮಾಸಪತ್ರಿಕೆಯ ಸಂಪಾದಕ ಭಾಸ್ಕರ್ ಹೆಗಡೆ ಅವರನ್ನು ಗೌರವಿಸಲಾಯಿತು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಪುಷ್ಪರಾಜ ಬಿ.ಎನ್., ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಸಂದೇಶ್ ಜೈನ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಇಂದಾಜೆ, ಜಿಲ್ಲಾ ಸಮಿತಿ ಸದಸ್ಯ ಭುವನೇಶ್ವರ ಜಿ., ಪತ್ರಕರ್ತರ ಸಂಘ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಸದಸ್ಯರಾದ ಬಿ.ಎಸ್.ಕುಲಾಲ್ ಹಾಗೂ ಆಚುಶ್ರೀ ಬಾಂಗೇರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮನೋಹರ ಬಳಂಜ ಸ್ವಾಗತಿಸಿದರು. ಕಾರ್ಯದರ್ಶಿ ಶಿಬಿ ಧರ್ಮಸ್ಥಳ ವಂದಿಸಿದರು. ಸದಸ್ಯ ಅಶ್ರಫ್ ಆಲಿಕುಂಞ ನಿರ್ವಹಿಸಿದರು.

ಪತ್ರಕರ್ತರ ಸಮಸ್ಯೆ ಮತ್ತು ಬವಣೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ತಾಲೂಕು ಸಂಘದ ಕಟ್ಟಡದ ಜಾಗ ಖರೀದಿಗೆ ವೈಯಕ್ತಿಕವಾಗಿ 2 ಲಕ್ಷ ರೂ. ಹಾಗೂ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 20 ಲಕ್ಷ ರೂ. ನೀಡುತ್ತೇನೆ. ಅಲ್ಲದೆ ವಿವಿಧ ಸಿಎಸ್‌ಆರ್ ನಿಧಿಗಳನ್ನು ಒದಗಿಸುವ ಪ್ರಯತ್ನಿಸುವೆ.

— ಹರೀಶ್ ಪೂಂಜ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net