ಇಪ್ಪತ್ತೈದು ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಪಡುಬಿದ್ರಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಂತೆ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಹಿಂದೆಯೂ ಗ್ರಾಮಸಭೆ ಹಾಗೂ ಸಾವಾನ್ಯ ಸಭೆಯಲ್ಲಿ ಮೇಲ್ದರ್ಜೆಗೇರಿಸುವಂತೆ ನಿರ್ಧರಿಸಿದರೂ ಈಡೇರಿರಲಿಲ್ಲ. ಗ್ರಾಪಂ ಮೇಲ್ದರ್ಜೆಗೇರಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳ ಮೂಲಕ ಸರ್ಕಾರವನ್ನು ಒತ್ತಾಯಿಸುವ ಪ್ರಯತ್ನಗಳಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪಡುಬಿದ್ರಿ ಗ್ರಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಶಶಿಕಲಾ ವೈ. ಅಧ್ಯಕ್ಷತೆಯಲ್ಲಿ ಗುರುವಾರ ಗ್ರಾಮಸಭೆ ನಡೆಯಿತು. ಕೆಐಎಡಿಬಿ ಸ್ವಾಧಿನಪಡಿಸಿಕೊಂಡು ಬಳಕೆ ವಾಡದಿರುವ ಜಮೀನುಗಳನ್ನು ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರಿಗೆ ಮತ್ತು ಅಗತ್ಯವಿರುವ ಯೋಜನೆಗಳಿಗಾಗಿ ಹಿಂಪಡೆಯಲು ಸರ್ಕಾರಿ ಮಟ್ಟದಲ್ಲಿ ಪ್ರಯತ್ನ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಆಸುಪಾಸಿನ ಗ್ರಾಮಗಳಲ್ಲಿ ಕೈಗಾರಿಕೆಗಳಿಗಾಗಿ ಸ್ವಾಧಿನಗೊಂಡಿರುವ ಜಮೀನಿನಲ್ಲಿ ಪ್ರಸ್ತಾವಿತ ವಿವಾನ ನಿಲ್ದಾಣ ಹಾಗೂ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ವಾಣ ಯೋಜನೆಗೆ ಬೆಂಬಲಿಸುವ ನಿರ್ಧಾರ ಕೈಗೊಳ್ಳಲಾಯಿತು.
ಪಶುಸಂಗೋಪನೆ ಇಲಾಖೆ ಕಚೇರಿಗೆ ಸಮಸ್ಯೆ
ಪಶುಸಂಗೋಪನಾ ಇಲಾಖೆ ಕಚೇರಿ ಆವರಣಕ್ಕೆ ಹೊಂದಿಕೊಂಡು ಇರುವ ಗ್ರಾಪಂ ಕಟ್ಟಡದ ಬಾಗಿಲನ್ನು ತೆರೆದಿರುವುದಕ್ಕೆ ಪಶುವೈದ್ಯ ಡಾ.ವಿಜಯ ಕುವಾರ್ ಆಕ್ಷೇಪ ವ್ಯಕ್ತಪಡಿಸಿದರು. ಇದು ಗ್ರಾಪಂ ಸದಸ್ಯರು ಹಾಗೂ ವೈದ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಪಶು ಇಲಾಖೆಯ ಕಾರ್ಯಗಳಿಗೆ ತೊಂದರೆಯಾದಂತೆ ಇದನ್ನು ಜವಾಬ್ದಾರಿಯುತವಾಗಿ ಪಂಚಾಯಿತಿ ನಿರ್ವಹಿಸಲಿದೆ ಎಂದು ಪಿಡಿಒ ಮಂಜುನಾಥ ಶೆಟ್ಟಿ ಭರವಸೆ ನೀಡಿದರು.
ಮೆಸ್ಕಾಂ ಸಹಾಯಕ ಇಂಜಿನಿಯರ್ ಎಂ.ಹುಸೇನ್, ಶಿಕ್ಷಣ ಸಂಯೋಜಕಿ ರಮಣಿ, ವೈದ್ಯಾಧಿಕಾರಿ ಡಾ.ರಾಜಶ್ರೀ ಕಿಣಿ, ಅಂಗನವಾಡಿ ಮೇಲ್ವಿಚಾರಕಿ ಶೈಲಾ, ಅರಣ್ಯ ಇಲಾಖೆಯ ಮಲ್ಲಿಕಾರ್ಜುನ, ತೋಟಗಾರಿಕಾ ಇಲಾಖೆಯ ದಿವ್ಯಾ, ಗ್ರಾವಾಡಳಿತಾಧಿಕಾರಿ ಮಥಾಯಿ ತಮ್ಮ ಇಲಾಖೆಗಳ ವಾಹಿತಿ ನೀಡಿದರು.
ಸವಾಜಕಲ್ಯಾಣ ಇಲಾಖೆಯ ರೋಶನ್ ಕುವಾರ್ ವಾರ್ಗದರ್ಶಿ ಅಧಿಕಾರಿಯಾಗಿ ಪಾಲ್ಗೊಂಡಿದ್ದರು. ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ರೂಪಲತಾ ವರದಿ ವಾಚಿಸಿದರು.
ಪೊಲೀಸ್ ಠಾಣೆ ಸ್ಥಳಾಂತರ ಬೇಡ
ಪಡುಬಿದ್ರಿ ಬಿಟ್ಟು ಬೇರೆಡೆಗೆ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸುವುದಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಆದರೆ ಠಾಣೆಯನ್ನು ಅದರ ಸ್ವಂತ ಜಾಗದಲ್ಲಿ ನಿರ್ಮಿಸಲು 5 ಎಕರೆ ಜಾಗವನ್ನು ಕಂದಾಯ ಇಲಾಖೆ ಮೂಲಕ ನೀಡುವಂತೆ ಪಂಚಾಯಿತಿ ಸಾವಾನ್ಯ ಸಭೆಯು ನಿರ್ಣಯಿಸಿದೆ ಎಂದು ಸಭೆಗೆ ತಿಳಿಸಲಾಯಿತು. ಪಡುಬಿದ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಫ್ಲೈಓವರ್ ನಿರ್ಮಿಸಲು ಒತ್ತಾಯಿಸಿ ಗ್ರಾಮಸಭೆಯಲ್ಲಿ ಸರ್ವಾನುಮತದ ನಿರ್ಣಯ ಮಂಡಿಸಿ ಅನುಮೋದಿಸಲಾಯಿತು.