ಉಡುಪಿಯಲ್ಲಿ 'ಸಿಗ್ನೇಚರ್​' ಸಮುಚ್ಚಯ ಸಜ್ಜು

ಉಡುಪಿಯ ಬನ್ನಂಜೆಯಲ್ಲಿ ನಿರ್ಮಾಣಗೊಂಡಿರುವ ಬೃಹತ್​ 'ಸಿಗ್ನೇಚರ್​' ವಸತಿ-ವಾಣಿಜ್ಯ ಸಮುಚ್ಚಯ.
ಉಡುಪಿಯ ಬನ್ನಂಜೆಯಲ್ಲಿ ನಿರ್ಮಾಣಗೊಂಡಿರುವ ಬೃಹತ್​ 'ಸಿಗ್ನೇಚರ್​' ವಸತಿ-ವಾಣಿಜ್ಯ ಸಮುಚ್ಚಯ.
Published on

* ಅತ್ಯಾಧುನಿಕ ಸೌಕರ್ಯದ ವಸತಿ-ವಾಣಿಜ್ಯ ಕಟ್ಟಡ

* ಅಂತಿಮ ಹಂತದಲ್ಲಿ ಅಪಾರ್ಟ್​ಮೆಂಟ್​ ಕಾಮಗಾರಿ

ಉಡುಪಿ: ನಗರದ ಹೃದಯ ಭಾಗವಾದ ಬನ್ನಂಜೆಯ ಶ್ರೀ ನಾರಾಯಣಗುರು ಮಂದಿರದ ಸಮೀಪದಲ್ಲಿ ಅಸೋಸಿಯೇಟ್​ ಬಿಲ್ಡರ್ಸ್​ ಆ್ಯಂಡ್​ ಕನ್​ಸ್ಟ್ರಕ್ಷನ್ಸ್​ (ಎಬಿಸಿ) ಸಂಸ್ಥೆಯ 'ಸಿಗ್ನೇಚರ್​' ವಸತಿ-ವಾಣಿಜ್ಯ ಸಮುಚ್ಚಯ ಸಜ್ಜುಗೊಳ್ಳುತ್ತಿದೆ. ಕಾಮಗಾರಿ ಅಂತಿಮ ಹಂತ ತಲುಪಿದೆ.
ಎಬಿಸಿ ಸಂಸ್ಥೆಯ ಪ್ರತಿಷ್ಠಿತ ಹಾಗೂ ನೂತನ ಯೋಜನೆಯಾಗಿ 'ಸಿಗ್ನೇಚರ್​' ನಿರ್ಮಾಣಗೊಳ್ಳುತ್ತಿದ್ದು, ಅತ್ಯಾಧುನಿಕ ಸೌಲಭ್ಯ ಹೊಂದಿರುವ 1, 2 ಮತ್ತು 3 ಬಿಎಚ್​ಕೆ ಅಪಾರ್ಟ್​ಮೆಂಟ್​ಗಳೂ ಇವೆ. ಈ ವಸತಿ ಹಾಗೂ ವಾಣಿಜ್ಯ ಸಮುಚ್ಚಯದಲ್ಲಿ ಬಹುತೇಕ ಫ್ಲ್ಯಾಟ್​ಗಳು ಈಗಾಗಲೇ ಮಾರಾಟ ಆಗಿದ್ದು, ಇನ್ನು ಕೆಲವೇ ಫ್ಲ್ಯಾಟ್​ಗಳು ಮಾತ್ರ ಲಭ್ಯವಿವೆ. 

ಕಾಲ್ನಡಿಗೆ ದೂರದಲ್ಲಿದೆ ಸಮುಚ್ಚಯ

ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ, ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ತಾಲೂಕು ಕಚೇರಿ ಮತ್ತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಯಿಂದ ಕಾಲ್ನಡಿಗೆ ದೂರದಲ್ಲಿ 'ಸಿಗ್ನೇಚರ್​' ಸಮುಚ್ಚಯವಿದೆ. ಬಸ್​ ನಿಲ್ದಾಣದಿಂದ ಅರ್ಧ ಕಿಮೀ, ಶ್ರೀಕೃಷ್ಣ ಮಠಕ್ಕೆ 1 ಕಿಮೀ, ಅಜ್ಜರಕಾಡು ಪಾರ್ಕ್​ಗೆ 1 ಕಿಮೀ, ಉಡುಪಿ ರೈಲ್ವೆ ಸ್ಟೇಷನ್​ಗೆ 4 ಕಿಮೀ. ಮಣಿಪಾಲಕ್ಕೆ 5 ಕಿಮೀ, ಮಲ್ಪೆ ಬೀಚ್​ಗೆ 4 ಕಿಮೀ ಅಂತರದಲ್ಲಿದೆ.

ಅತ್ಯಾಧುನಿಕ ಸೌಕರ್ಯ:

ಸಮುಚ್ಚಯದಲ್ಲಿ ಈಜುಕೊಳ, ಮೇಲ್ಛಾವಣಿಯಲ್ಲಿ ಜಾಗಿಂಗ್​ ಟ್ರ್ಯಾಕ್​, ಸುಸಜ್ಜಿತ ಜಿಮ್​, ಇವಿ ಚಾರ್ಜಿಂಗ್​, ಯೋಗ ಏರಿಯಾ, ಮೇಲ್ಛಾವಣಿ ಮೇಲ್ಬಾಗದಲ್ಲಿ ಲಾಂಜ್​ ಸಹಿತ ಹಲವಾರು ಅತ್ಯಾಧುನಿಕ ಸೌಕರ್ಯ ಒಳಗೊಂಡಿದೆ. ಈ ಯೋಜನೆಯು ರೇರಾ ಸಂಸ್ಥೆಯಿಂದ ಅನುಮೋದನೆ ಪಡೆದಿದ್ದು, ಗುಣಮಟ್ಟದ ಸಮುಚ್ಚಯ ನಿರ್ಮಾಣದ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಬುಕಿಂಗ್​ ಮತ್ತು ಮಾಹಿತಿಗೆ ಅಸೋಸಿಯೇಟ್​ ಬಿಲ್ಡರ್ಸ್​ ಆ್ಯಂಡ್​ ಕನ್​ಸ್ಟ್ರಕ್ಷನ್ಸ್​, ಬನ್ನಂಜೆ ಶ್ರೀ ನಾರಾಯಣಗುರು ಮಂದಿರದ ಸಮೀಪ ಅಥವಾ ವೆಬ್​ಸೈಟ್​ www.associatebuilders.in ಸಂಪರ್ಕಿಸಲು ಸಂಸ್ಥೆಯ ಪ್ರವರ್ತಕರ ಪ್ರಕಟಣೆ ತಿಳಿಸಿದೆ.

ಗುಣಮಟ್ಟದ ಸೌಕರ್ಯವೇ ವಿಶೇಷತೆ

ಉಡುಪಿಯಲ್ಲಿ ಪ್ರಥಮ ಬಾರಿಗೆ 'ಸಿಗ್ನೇಚರ್​'ನ ಇಡೀ ಸಮುಚ್ಚಯ ಗುಣಮಟ್ಟದ ಹಾಗೂ ವಿಶೇಷ ಸೌಕರ್ಯ ಹೊಂದಿದೆ. ಮನೆಯೊಳಗಡೆ ತಂಪು ವಾತಾವರಣಕ್ಕಾಗಿ ಒಳಗೋಡೆ ಹಾಗೂ ಹೊರಗೋಡೆಯನ್ನು ಸಂಪೂರ್ಣವಾಗಿ ಗಟ್ಟಿಮುಟ್ಟಿನ ಕೆಂಪು ಕಲ್ಲಿನಿಂದ ನಿರ್ಮಿಸಲಾಗಿದೆ. ಎಲ್ಲ ಬಾತ್​ರೂಮ್​ಗಳ ಫಿಟ್ಟಿಂಗ್ಸ್​ ಕಾರ್ಯವು ಗ್ರೋಹೆ ಮತ್ತು ಅಮೆರಿಕನ್​ ಸ್ಟ್ಯಾಂಡರ್ಡ್​ ಕಂಪನಿಯದ್ದಾಗಿದೆ. ಪ್ರತಿಯೊಂದು ಫ್ಲ್ಯಾಟ್​ನ ಮುಖ್ಯದ್ವಾರ, ಬೆಡ್​ರೂಮ್​ ಬಾಗಿಲುಗಳು, ಎಲ್ಲ ಮುಖ್ಯ ಬಾಗಿಲುಗಳು ಮತ್ತು ಇನ್ನಿತರ ಕೋಣೆಯ ಬಾಗಿಲುಗಳನ್ನು ಸಾಗುವಾನಿ ಮರದಿಂದ ಸಿದ್ಧಗೊಳಿಸಲಾಗಿದೆ. ಅಲ್ಲದೆ, ಎಲ್ಲ ನಿರ್ಮಾಣ ಕಾರ್ಯದಲ್ಲಿ ಉತ್ಕಷ್ಟ ಗುಣಮಟ್ಟದ ಸಾಮಗ್ರಿ ಬಳಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net