ಮುರ್ಡೇಶ್ವರ ಮೂಲದ ರಾಘವೇಂದ್ರ, ಫೈಜಾನ್, ನಾಗೇಂದ್ರ ಮತ್ತು ಧನು ರಕ್ಷಿಸಲ್ಪ ಮೀನುಗಾರರು. ಮುರ್ಡೇಶ್ವರ ಮೂಲದ ಮೀನುಗಾರರೊಬ್ಬರು ಮಲ್ಪೆಯಲ್ಲಿ ಖರೀದಿಸಿದ್ದ ಮಹಾಂಕಾಳಿ ಪ್ರಸಾದ್ ಮೀನುಗಾರಿಕಾ ದೋಣಿ ಗುರುವಾರ ಸಂಜೆ ಮಲ್ಪೆ ಬಂದರಿನಿಂದ ಮುರ್ಡೇಶ್ವರಕ್ಕೆ ಹೊರಟಿದ್ದು, ದೋಣಿಯ ಎರಡೂ ಇಂಜಿನ್ ಹಾಳಾದ ಪರಿಣಾಮ ದೋಣಿ ಸಮುದ್ರ ಮಧ್ಯದಲ್ಲಿ ಸಿಲುಕಿ ನಾಪತ್ತೆಯಾಗಿತ್ತು. ನೆಟ್‌ವರ್ಕ್ ಸಿಗದೆ ದೋಣಿಯಲ್ಲಿದ್ದ ಮೀನುಗಾರರಿಗೆ ಬೇರೆ ಮೀನುಗಾರರಿಗೆ ಮಾಹಿತಿ ನೀಡಲು ಸಾಧ್ಯವಾಗದೆ ಅಸಹಾಯಕರಾಗಿದ್ದರು. ದೋಣಿಯಲ್ಲಿದ್ದ ಮೀನುಗಾರರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು.